ಮಣಿಪಾಲ್ ಇನ್ ಹೊಟೇಲ್‌ನಲ್ಲಿ ಸ್ವಾತಂತ್ರ್ಯೋತ್ಸವದ ವಿಶೇಷ ಕೊಡುಗೆ
Update: 2021-08-14 20:55 IST
ಉಡುಪಿ, ಆ.14: ನಗರದ ಕರಾವಳಿ ಬೈಪಾಸ್‌ನ ರಾಷ್ಟ್ರೀಯ ಹೆದ್ದಾರಿ 66ರ ಸಮೀಪದಲ್ಲಿರುವ ಪ್ರತಿಷ್ಠಿತ ‘ಮಣಿಪಾಲ್ ಇನ್’ ಹೊಟೇಲ್‌ನಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಆ.15ರಂದು ಮಧ್ಯಾಹ್ನ 12ಗಂಟೆಯಿಂದ 3.30ರವರೆಗೆ ‘ಬಫೆಟ್ ಲಂಚ್’ನಲ್ಲಿ ವಿಶೇಷ ಕೊಡುಗೆಯನ್ನು ನೀಡಲಾಗಿದೆ.
ವಿರಾಸತ್ ಫೈನ್ ಡೈನ್ ನಾನ್‌ವೆಜ್ ರೆಸ್ಟೋರೆಂಟ್‌ನಲ್ಲಿ 750ರೂ.ಗೆ. 75 ಡಿಶಸ್‌ಗಳನ್ನು ಸವಿಯಬಹುದಾಗಿದೆ. ಇದರಲ್ಲಿ ಐದು ವರ್ಷದೊಳಗಿನ ಮಕ್ಕಳಿಗೆ ಸಂಪೂರ್ಣ ಉಚಿತ ಹಾಗೂ 11ವರ್ಷ ಕೆಳಗಿನ ಮಕ್ಕಳಿಗೆ ಶೇ.50ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ.
ಅದೇ ರೀತಿ ಸ್ವಾತಂತ್ರೋತ್ಸವದ ವಿಶೇಷ ಆಫರ್ ಆಗಿ ಆ.31ರವರೆಗೆ ಸೋಮವಾರದಿಂದ ಗುರುವಾರದವರೆಗೆ ಶೇ.20 ಹಾಗೂ ಶುಕ್ರವಾದಿಂದ ರವಿವಾರದವರೆಗೆ ಶೇ.10ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿ ಗಾಗಿ ಮೊಬೈಲ್- 8660567239, 8660566237, 8660567909ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.