ಉಡುಪಿ ನಿರಾಶ್ರಿತರ ಪುರ್ನವಸತಿ ಕೇಂದ್ರಕ್ಕೆ ಭೇಟಿ
Update: 2021-08-14 21:18 IST
ಉಡುಪಿ, ಆ.14: ಅವ್ಯವಸ್ಥೆ ಕುರಿತ ದೂರಿನ ಹಿನ್ನೆಲೆಯಲ್ಲಿ ಬೀಡಿನಗುಡ್ಡೆ ಯಲ್ಲಿರುವ ನಗರ ವಸತಿ ರಹಿತರ ಆಶ್ರಯ ಕೇಂದ್ರದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶೆ ಶರ್ಮಿಳಾ ಎಸ್. ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
ಕೇಂದ್ರದಲ್ಲಿ ಅಸಮರ್ಪಕ ವ್ಯವಸ್ಥೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಶರ್ಮಿಳಾ ಎಸ್., ಸಂಬಂಧಪಟ್ಟವರಿಗೆ ಸುವ್ಯವಸ್ಥೆ ಕಾಪಾಡುವಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಎಫ್.ಡಿ.ಎ ಅನಿಲ್, ಪ್ರಾಧಿಕಾರದ ಕಾನೂನು ಸ್ವಯಂ ಸೇವಕ ನಿತಾ್ಯನಂದ ಒಳಕಾಡು ಉಪಸ್ಥಿತರಿದ್ದರು.