×
Ad

ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣ: ಸಚಿವ ಕೋಟಗೆ ಮನವಿ

Update: 2021-08-14 21:52 IST

ಉಡುಪಿ, ಆ.14: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮತ್ತು ಅಂಬೇಡ್ಕರ್ ಯುವಸೇನೆಯ ವತಿಯಿಂದ ರಾಜ್ಯ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಉಡುಪಿ ಪ್ರವಾಸಿ ಮಂದಿರದಲ್ಲಿ ಶನಿವಾರ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ರಾಜ್ಯದ ಪರಿಶಿಷ್ಟಜಾತಿ ಜನರ ಅಭಿವೃದ್ಧಿಗೆ ಪೂರಕ ವಾದ ಮನವಿಯನ್ನು ಸಲ್ಲಿಸಲಾಯಿತು. ದಲಿತ ಚಿಂತಕ ಜಯನ್ ಮಲ್ಪೆ ನೇತೃತ್ವ ದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಜೊತೆ ನಡೆದ ಸಮಾಲೋಚನ ಸಭೆಯಲ್ಲಿ ಉಡುಪಿ ಜಿಲ್ಲೆಗೆ ಒಂದು ಸುಸಜ್ಜಿತ ಅಂಬೇಡ್ಕರ್ ಭವನದ ನಿರ್ಮಾಣ, ದಲಿತ ಕುಟುಂಬದ ವಾರ್ಷಿಕ ಆದಾಯ ಮಿತಿ ಹೆಚ್ಚಳ, ಡಿ.ಸಿ ಮನ್ನಾ ಭೂಮಿಯನ್ನು ಅರ್ಹ ಭೂರಹಿತ ಫಲಾನುಭವಿಗಳಿಗೆ ಹಂಚಿಕೆ ಮಾಡುವಂತೆ ಒತ್ತಾಯಿಸಲಾಯಿತು.

ಕೊರಗ ಸಮುದಾಯದ ಅಭಿವೃದ್ಧಿಗೆ ರೂಪಿಸಲಾದ ಯೋಜನೆಯನ್ನು ಇತರ ಜಾತಿಯವರ ಪಾಲಾಗುತ್ತಿರುವ ಬಗ್ಗೆ, ಬ್ಯಾಕ್‌ಲಾಗ್ ಹುದ್ದೆಯನ್ನು ಶೀಘ್ರದಲ್ಲಿ ಭರ್ತಿಗೊಳಿಸವಂತೆ ಹಾಗೂ ಕುಂದಾಪುರ ಬೈದೂರು ತಾಲೂನಿನ ದಲಿತರ ವಿವಿಧ ಸಮಸ್ಯೆಗಳ ಕುರಿತು ದಸಂಸ ಮುಖಂಡರು ಸಚಿವರೊಂದಿಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ವಿಠಲದಾಸ್ ಬನ್ನಂಜೆ, ದಲಿತ ಮುಖಂಡರುಗಳಾದ ಮಂಜುನಾಥ ಗಿಳಿಯಾರು, ವಾಸುದೇವ ಬನ್ನಂಜೆ, ರಾಜು ಬೆಟ್ಟಿನಮನೆ, ಸಂಜೀವ ಬಲ್ಕೂರು, ಅಂಬೇಡ್ಕರ್ ಯುವಸೇನೆಯ ಹರೀಶ್ ಸಲ್ಯಾನ್, ಸಂತೋಷ್ ಕಪ್ಪೆಟ್ಟು, ಗುಣವಂತ ತೊಟ್ಟಂ, ಸುಮಿತ್ ನೆರ್ಗಿ, ದಿನೇಶ್ ಮೂಡಬೆಟ್ಟು, ರಾಮೋಜಿ ಬಲರಾಮನಗರ, ಮೋಹನ್ ದಾಸ್ ಚಿಟ್ಪಾಡಿ, ಗೀತಾ ಸುರೇಶ್, ಚೈತ್ರ, ನರಸಿಂಹ ಹಳಗೇರಿ, ಪ್ರಭಾಕರ್ ಕುಂದಾಪುರ, ನಾಗರಾಜ ಉಪುಂದ ಮುಂತಾದವರು ಭಾಗವಹಿಸಿದ್ದರು. ಕುಮಾರ್ ಕೋಟ ಸ್ವಾಗತಿಸಿದರು. ಗೋಪಾಲ ಗಿಳಿಯಾರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News