ಯುವಕ ಆತ್ಮಹತ್ಯೆ
Update: 2021-08-14 22:03 IST
ಬ್ರಹ್ಮಾವರ, ಆ.14: ವರ್ಕ್ ಫ್ರಮ್ ಹೋಮ್‌ನಲ್ಲಿದ್ದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಗ್ಗುಂಜೆ ಗ್ರಾಮದ ಮಂದಾರ್ತಿ ಎಂಬಲ್ಲಿ ಆ.13ರಂದು ಮಧ್ಯಾಹ್ನ ವೇಳೆ ನಡೆದಿದೆ.
ಮೃತರನ್ನು ಮಂದಾರ್ತಿಯ ಪದ್ಮಾವತಿ ಎಂಬವರ ಮಗ ಹರ್ಷ ಆಚಾರ್ಯ (33) ಎಂದು ಗುರುತಿಸಲಾಗಿದೆ. ಇವರು 2019ರಲ್ಲಿ ಲಂಡನ್‌ನಲ್ಲಿ ಪ್ರೊಜೆಕ್ಟ್ ಕೆಲಸ ಮಾಡಿಕೊಂಡಿದ್ದು, 2020ರಲ್ಲಿ ಲಾಕ್‌ಡೌನ್ ಕಾರಣಕ್ಕೆ ಜುಲೈಯಲ್ಲಿ ಊರಿಗೆ ಬಂದು ಮನೆಯಲ್ಲಿಯೇ ವರ್ಕ್ ಫ್ರಂ ಹೋಮ್ ಮಾಡಿಕೊಂಡಿದ್ದನು. ಅವರು ಪ್ರೊಜೆಕ್ಟ್ ವಿಚಾರದಲ್ಲಿ ಕಷ್ಟ ಆಗುತ್ತಿರುವ ಬಗ್ಗೆ ತಾಯಿ ಹಾಗೂ ಅವರ ದೊಡ್ಡ ಅಕ್ಕನ ಬಳಿ ಹೇಳುತ್ತಿದ್ದ ಎನ್ನಲಾಗಿದೆ.
ಕೆಲಸ ಮಾಡಲು ಮನೆಯ ತಾರಸಿ ಮೇಲಿರುವ ರೂಮಿಗೆ ಹೋದ ಇವರು, ರೂಮಿನ ಫ್ಯಾನಿಗೆ ಟಿಲಿಫೋನ್ ಕೇಬಲ್ ಕಟ್ಟಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.