ಇಸ್ರೇಲ್-ಯುಎಇ ತೈಲ ಒಪ್ಪಂದದಿಂದ ಕೆಂಪು ಸಮುದ್ರದ ಹವಳದ ದಿಬ್ಬಕ್ಕೆ ಅಪಾಯದ ಸಾಧ್ಯತೆ

Update: 2021-08-14 17:49 GMT
photo : twitter.com/djokaymegamixer

  ಜೆರುಸಲೇಂ, ಆ.14: ಇಸ್ರೇಲ್ ಮತ್ತು ಯುಎಇ ನಡುವೆ ತೈಲ ಪೂರೈಕೆಗೆ ಸಂಬಂಧಿಸಿದ ರಹಸ್ಯ ಒಪ್ಪಂದದಿಂದ ಇಸ್ರೇಲ್ನ ಎಲಾತ್ ನಗರದ ಬಳಿ, ಕೆಂಪು ಸಮುದ್ರದಲ್ಲಿರುವ ಅಮೂಲ್ಯ ಪ್ರಾಕೃತಿಕ ಸಂಪತ್ತಾಗಿರುವ ಹವಳದ ದಿಬ್ಬಕ್ಕೆ ಅಪಾಯ ಎದುರಾಗಲಿದೆ ಎಂದು ಪರಿಸರವಾದಿ ಸಂಘಟನೆಗಳು ಆತಂಕ ವ್ಯಕ್ತಪಡಿಸಿದ್ದಾರೆ.

  ಇಸ್ರೇಲ್- ಯುಇಎ ನಡುವಿನ ರಾಜತಾಂತ್ರಿಕ ಸಂಬಂಧವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಕಳೆದ ವರ್ಷ ಸಹಿ ಹಾಕಲಾಗಿರುವ ಐತಿಹಾಸಿಕ ಒಪ್ಪಂದದಲ್ಲಿ ಈ ರಹಸ್ಯ ತೈಲ ಒಪ್ಪಂದವೂ ಸೇರಿದೆ. ಈ ಒಪ್ಪಂದ ಕಾರ್ಯಗತವಾದರೆ ಎಮಿರೇಟ್ಸ್ನಿಂದ ತೈಲಹೊತ್ತು ಪಾಶ್ಚಿಮಾತ್ಯ ಮಾರುಕಟ್ಟೆಗಳತ್ತ ಸಾಗುವ ಹಡಗುಗಳಿಗೆ ಎಲಾತ್ ನಗರದ ಬಂದರು ತಂಗುದಾಣವಾಗಲಿದೆ ಮತ್ತು ಇದು ಅನತಿ ದೂರದಲ್ಲಿರುವ ಅಮೂಲ್ಯ ಹವಳದ ದಿಬ್ಬಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತವಾಗಿದೆ. ದ್ವಿಪಕ್ಷೀಯ ಸಂಬಂಧ ಸುಧಾರಣೆಯತ್ತ ಒಂದು ಪ್ರಮುಖ ಹೆಚ್ಚೆ ಎಂದು ಆರಂಭದಲ್ಲಿ ಈ ಒಪ್ಪಂದದ ಬಗ್ಗೆ ಶ್ಲಾಘನೆಯಿದ್ದರೂ ಇದರ ದೂರಗಾಮಿ ಪರಿಣಾಮಗಳ ಬಗ್ಗೆ ಈಗ ಹೂಡಿಕೆದಾರರೂ ಕಳವಳಗೊಂಡಿದ್ದಾರೆ ಎಂದು ವರದಿಯಾಗಿದೆ.

 ಅಮೆರಿಕ ಮಧ್ಯಸ್ಥಿಕೆಯಲ್ಲಿ ಕಳೆದ ವರ್ಷ ಇಸ್ರೇಲ್-ಯುಇಎ ನಡುವಿನ ಅಬ್ರಹಾಂ ಒಪ್ಪಂದಗಳಲ್ಲಿ 830 ಮಿಲಿಯ ಡಾಲರ್ಗಳಿಗೂ ಹೆಚ್ಚಿನ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಇದರಲ್ಲಿ ಇಸ್ರೇಲ್ ಸರಕಾರದ ಅಧೀನದಲ್ಲಿರುವ ಯುರೋಪ್ ಏಶ್ಯಾ ಪೈಪ್ಲೈನ್ ಕಂಪೆನಿ ಮತ್ತು ಇಸ್ರೇಲ್ -ಎಮಿರೇಟ್ಸ್ ಜಂಟಿ ಸಹಯೋಗದ ಸಂಸ್ಥೆ ‘ಮೆಡ್ ರೆಡ್ ಲ್ಯಾಂಡ್ ಬ್ರಿಡ್ಜ್’ ನಡುವಿನ ಒಪ್ಪಂದ ರಹಸ್ಯವಾಗಿಯೇ ಇದೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News