ಕಲಾಯಿ: ಎಸ್‌ಡಿಪಿಐನಿಂದ ಸ್ವಾತಂತ್ರೋತ್ಸವ
Update: 2021-08-15 20:47 IST
ಮಂಗಳೂರು ಆ.15: ಎಸ್‌ಡಿಪಿಐ ಕಲಾಯಿ ಬೂತ್‌ನಿಂದ ಮದೀನಾ ಜುಮಾ ಮಸೀದಿ ಮುಂಭಾಗದಲ್ಲಿ ನಡೆದ ಸ್ವಾತಂತ್ರೋತ್ಸವದ ಕಾರ್ಯಕ್ರಮದಲ್ಲಿ ಎಸ್‌ಡಿಪಿಐ ಕಲಾಯಿ ಬೂತ್ ಅಧ್ಯಕ್ಷ ಉಸ್ಮಾನ್ ಕಲಾಯಿ ಹಾಗೂ ಮದೀನಾ ಜುಮಾ ಮಸೀದಿ ಕಲಾಯಿ ಉಪಾಧ್ಯಕ್ಷ ಮೊನಾಕ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಪಿಎಫ್‌ಐ ಕಲಾಯಿ ವಲಯ ಅಧ್ಯಕ್ಷ ನೌಶಾದ್ ಕಲಾಯಿ ಮಾತನಾಡಿದರು. ಮದೀನಾ ಜುಮಾ ಮಸೀದಿಯ ಕಾರ್ಯದರ್ಶಿ ಇಮ್ತಿಯಾಝ್ ಉಪಸ್ಥಿತರಿದ್ದರು. ಅಝರುದ್ದೀನ್ ಕಲಾಯಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.