ಉಡುಪಿ: ಕರ್ನಾಟಕ ರಾಷ್ಟ್ರ ಸಮಿತಿ ವತಿಯಿಂದ ಸಾಧಕರಿಗೆ ಸನ್ಮಾನ
Update: 2021-08-15 21:45 IST
ಉಡುಪಿ, ಆ.15: ಕರ್ನಾಟಕ ರಾಷ್ಟ್ರ ಸಮಿತಿ ಉಡುಪಿ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಉಡುಪಿಯ ಕಾಡಬೆಟ್ಟುನಲ್ಲಿ ನಡೆದ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.
ಕಾಪು ಸಮಾಜ ಸೇವಾ ವೇದಿಕೆ ಅಧ್ಯಕ್ಷ ಮುಹಮ್ಮದ್ ಫಾರೂಕ್ ಚಂದ್ರನಗರ, ಸಂಚಾಲಕ ದಿವಾಕರ ಡಿ.ಶೆಟ್ಟಿ ಕಳತ್ತೂರು, ಗೌರವಾಧ್ಯಕ್ಷ ದಿವಾಕರ ಬಿ.ಶೆಟ್ಟಿ ಕಳತ್ತೂರು ಹಾಗೂ ಉಡುಪಿ ಹಾಜಿ ಅಬ್ದುಲ್ಲ ಚಾರಿಟೇಬಲ್ ಟ್ರಸ್ಟ್ ಟ್ರಸ್ಟಿ ಇಕ್ಬಾಲ್ ಮುನ್ನ ಅವರಿಗೆ ಕೆ.ಆರ್.ಎಸ್. ಜಿಲ್ಲಾಧ್ಯಕ್ಷ ಅಶೋಕ್ರಾಜ್ ಕಾಡಬೆಟ್ಟು ಉಡುಪಿ ಜಿಲ್ಲಾ ಸಾಧಕ ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಲ್ಪಸಂಖ್ಯಾತ ಅಧ್ಯಕ್ಷ ಎಂ.ಇಕ್ಬಾಲ್ ಕುಂಜಿಬೆಟ್ಟು, ಕಾರ್ಯದರ್ಶಿ ಹನೀಫ್ ಕಾಪು, ಕಾನೂನು ಘಟಕ ಅಧ್ಯಕ್ಷ ಭರತ್ ಪೈ, ಜಿಲ್ಲಾ ಅಲ್ಪಸಂಖ್ಯಾತ ಉಪಾಧ್ಯಕ್ಷ ಜಾಹೀದ ಬಾನು ಮೊದಲಾದವರು ಉಪಸ್ಥಿತರಿದ್ದರು.