×
Ad

ಕಾರ್ಕಳ ತಾಲೂಕಿನ ಲೈನ್ ಮ್ಯಾನ್ ಗಳೊಂದಿಗೆ ಇಂಧನ ಸಚಿವ ಸುನೀಲ್ ಕುಮಾರ್ ಸಹಭೋಜನ

Update: 2021-08-15 22:11 IST

ಕಾರ್ಕಳ: ಇಂಧನ ಸಚಿವ ವಿ. ಸುನೀಲ್ ಕುಮಾರ್ ಅವರು ತನ್ನ ಹುಟ್ಟುಹಬ್ಬವನ್ನು ಕಾರ್ಕಳ ತಾಲೂಕಿನ ಲೈನ್ ಮ್ಯಾನ್ ಗಳೊಂದಿಗೆ ಸಹಬೋಜನವನ್ನು ಆಯೋಜಿಸುವ ಮೂಲಕ ಇಂದು ಆಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಂಧನ ಇಲಾಖೆಯ ವತಿಯಿಂದ ಲೈನ್ ಮ್ಯಾನ್ ನಿಂದ ಹಿಡಿದು ಕಾರ್ಯ ನಿರ್ವಾಹಕ ಅಭಿಯಂತರ ವರೆಗೆ ಯಾವುದೇ ಸಮಸ್ಯೆಗಳಿದ್ದರೆ ಮಾತುಕತೆ ನಡೆಸಿ ಬಗೆಹರಿಸುವ ಪ್ರಯತ್ನ ಮಾಡಲಾಗುವುದು. ನಮ್ಮ ಇಲಾಖೆಯ ಎಲ್ಲಾ ಕೆಲಸ ಕಾರ್ಯಗಳು ನಿರ್ವಿಗ್ನವಾಗಿ ನಡೆಯಬೇಕು. ಇದಕ್ಕೆ ನನ್ನ ಪೂರ್ಣ ಸಹಕಾರವಿದೆ. ನಿಮ್ಮ ಸಹಕಾರವು ಅತ್ಯಗತ್ಯ ಎಂದು ಹೇಳಿದರು.

ತಮ್ಮ ಸಮಸ್ಯೆಗಳಿಗೆ ನೇರವಾಗಿ ನನ್ನನ್ನು ಸಂಪರ್ಕಿಸಬಹುದು. ಮುಖ್ಯವಾಗಿ ನನ್ನ ತಾಲೂಕಿನ ಜನತೆಗೆ ತೊಂದರೆಯಾಗದಂತೆ ಕೆಲಸ ನಿರ್ವಹಿಸಲು ಸುನೀಲ್ ಕುಮಾರ್ ಅವರು ಕರೆ ನೀಡಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News