×
Ad

ಬೋಳಂತೂರು : ಸಾರ್ವಜನಿಕ ರಕ್ತದಾನ ಶಿಬಿರ

Update: 2021-08-15 22:44 IST

ಬೋಳಂತೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ಬಿ.ಕೆ ಬಾಯ್ಸ್  ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್  ಕ್ಲಬ್ ಬಂಗಾರ ಕೋಡಿ, ಬೋಳಂತೂರು ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಜಂಟಿ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ರಕ್ತನಿಧಿ ಮಂಗಳೂರು ಸಹಯೋಗದೊಂದಿಗೆ  ಸಾರ್ವಜನಿಕ ರಕ್ತದಾನ ಶಿಬಿರವು ಬೋಳಂತೂರು ಶಾಲೆಯಲ್ಲಿ ನಡೆಯಿತು.

ರಕ್ತದಾನ ಶಿಬಿರದಲ್ಲಿ ಒಟ್ಟು 106 ಜನಸ್ನೇಹಿ ರಕ್ತದಾನಿಗಳು ರಕ್ತದಾನ ಮಾಡುವ ಮೂಲಕ ಜೀವ ಕಾರುಣ್ಯ ಸೇವೆಯಲ್ಲಿ ಪಾಲ್ಗೊಂಡರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ರಕ್ತನಿಧಿಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.

ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಇಸ್ಮಾಯಿಲ್ ಅವರು ಅಧ್ಯಕ್ಷತೆಯನ್ನು ವಹಿಸಿದ್ದ ಕಾರ್ಯಕ್ರಮವನ್ನು ಹಮೀದ್ ಮುಸ್ಲಿಯಾರ್  ಉದ್ಘಾಟನೆಗೈದರು. ಅತಿಥಿಗಳಾಗಿ ಉಮರಬ್ಬ (ಸದಸ್ಯರು, ಎಸ್.ಡಿ.ಎಂ.ಸಿ), ಉಸ್ಮಾನ್ ಬಿ (ಕೋಶಾಧಿಕಾರಿ, ಹಳೆ ವಿಧ್ಯಾರ್ಥಿ ಸಂಘ), ಮುಹಮ್ಮದ್ ಬಿ (ಅಧ್ಯಕ್ಷರು, ಎಸ್.ಡಿ.ಪಿ.ಐ), ಹರೀಶ. ವಿ (ಮುಖ್ಯೋಪಾಧ್ಯಾಯರು), ಮುಸ್ತಫಾ ಬಂಗಾರ ಕೋಡಿ (ಅಧ್ಯಕ್ಷರು ,ಬಿ.ಕೆ ಬಾಯ್ಸ್), ಅನ್ಸಾರ್  ಬಿ.ಜಿ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಯ ಕಾರ್ಯನಿರ್ವಾಹಕರು ಉಪಸ್ಥಿತರಿದ್ದರು.

ಜಾಬೀರ್ ಮುಬಶ್ಯಿರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News