ಕೋಡಿಜಾಲ್: 75ನೇ ಸ್ವಾತಂತ್ರ್ಯೋತ್ಸವ ಆಚರಣೆ

Update: 2021-08-15 17:37 GMT

ಕೊಣಾಜೆ, ಆ.15: ಕೋಡಿಜಾಲ್ ರಿಫಾಯಿ ಜುಮಾ ಮಸ್ಜಿದ್, ಖಿದ್ಮತುಲ್ ಇಸ್ಲಾಂ ಅಸೋಸಿಯೇಷನ್ ಕೋಡಿಜಾಲ್ ಹಾಗೂ ಜಿಸಿಸಿ ಘಟಕ, ಹಯಾತುಲ್ ಇಸ್ಲಾಂ ಮದ್ರಸ ಕೋಡಿಜಾಲ್ ಇದರ ಆಶ್ರಯದಲ್ಲಿ ಮಸೀದಿ ಆವರಣದಲ್ಲಿ 75ನೆ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಸೀದಿಯ ಅಧ್ಯಕ್ಷ  ಹಾಜಿ ಇಬ್ರಾಹೀಂ ಕೋಡಿಜಾಲ್ ಧ್ವಜಾರೋಹಣಗೈದು ಸ್ವಾತಂತ್ರ ದಿನಾಚರಣೆಯ ಸಂದೇಶ ನೀಡಿದರು.

ಮಸೀದಿಯ ಖತೀಬ್ ಅಲ್ಹಾಜ್ ಅಬೂಬಕರ್ ಸಖಾಫಿ ಮತ್ತು ರಾಮಕೃಷ್ಣ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರ ರೈ ಅವರು ಸ್ವಾತಂತ್ರ ದಿನಾಚರಣೆಯ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಕೊಣಾಜೆ ಗ್ರಾಮ ಪಂಚಾಯತ್  ಸದಸ್ಯರಾದ ಅಚ್ಚುತ ಗಟ್ಟಿ, ಮುಹಮ್ಮದ್ ಇಕ್ಬಾಲ್ ಕೊಣಾಜೆ, ರವಿಕುಮಾರ್ ಡಿ'ಸೋಝ, ಎಪಿಎಂಸಿ ಉಪಾಧ್ಯಕ್ಷೆ ಮುತ್ತು ಶೆಟ್ಟಿ, ಮಸೀದಿಯ ಕೋಶಾಧಿಕಾರಿ ಹಾಜಿ ಮುಹಮ್ಮದ್, ಉಪಾಧ್ಯಕ್ಷರಾದ  ಅಬ್ದುಲ್ ಖಾದರ್ ಅಂದುಚ್ಚ, ಕಾರ್ಯದರ್ಶಿ ಮಸೂದ್, ಸದರ್ ಮುಅಲ್ಲಿಮ್ ಉಮರ್ ಸಅದಿ, ಮುಹಝ್ಝಿನ್ ಇಬ್ರಾಹೀಂ ಎಚ್.ಎಂ., ಖಿದ್ಮತುಲ್ ಇಸ್ಲಾಂ ಅಸೋಸಿಯೇಷನ್‌ನ ಅಧ್ಯಕ್ಷ ಅಮೀರ್ ಕೋಡಿಜಾಲ್, ಉಪಾಧ್ಯಕ್ಷ ರಝಾಕ್, ಪ್ರಧಾನ ಕಾರ್ಯದರ್ಶಿ ಶರೀಫ್, ಕೋಶಾಧಿಕಾರಿ ಅಶ್ರಫ್, ಕಾರ್ಯದರ್ಶಿ ರಿಯಾಝ್, ದಮಾಮ್ ಜಿಸಿಸಿ ಘಟಕದ ಕಾರ್ಯದರ್ಶಿ ತನ್ವೀರ್, ಸಿದ್ದೀಕ್ ಡಿ.ಎಂ,  ರಿಯಾಝ್ ಕಂಗುಹಿತ್ಲು, ಅಬ್ದುಲ್ ಖಾದರ್ ಜೀಲಾನಿ ಹಾಗೂ ಮದ್ರಸ ಆಡಳಿತ ಸಮಿತಿಯ ಇಬ್ರಾಹಿಂ ಕೆ.ಎಂ., ಹಸೈನಾರ್ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ  ಜಮಾಅತ್ ಮತ್ತು ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು, ಮದ್ರಸ ವಿದ್ಯಾರ್ಥಿಗಳು  ಹಾಗೂ ಊರಿನ ನಾಗರಿಕರು ಭಾಗವಹಿಸಿದ್ದರು. ಮಸೀದಿಯ ಕಾರ್ಯದರ್ಶಿ ರಹ್ಮಾನ್ ಕೆ.ಎಸ್. ಸ್ವಾಗತಿಸಿದರು. ಸಮಿತಿಯ ಗೌರವಾಧ್ಯಕ್ಷ ಅಬ್ದುಲ್ ರಹ್ಮಾನ್ ಕೆ.ಎಂ. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News