ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದ.ಕ. ಜಿಲ್ಲಾ ಸಮಿತಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Update: 2021-08-15 18:30 GMT

ಮಂಗಳೂರು, ಆ.15: ದೇಶದ ಎಪ್ಪತ್ತೈದನೇ ಸ್ವಾತಂತ್ರ್ಯ ಸಮಾರಂಭದ ಸಡಗರವನ್ನು  ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ತನ್ನ ಜಿಲ್ಲಾ ಕಚೇರಿಯಲ್ಲಿ ಬಹಳ ಸರಳ ರೀತಿಯಲ್ಲಿ ಆಚರಿಸಿಕೊಂಡಿತು. 

ಕಚೇರಿಯ ಮುಂಭಾಗದ ಹೊರಾಂಗಣದಲ್ಲಿ ಧ್ವಜಾರೋಹಣಗೈದ ವೆಲ್ಫೇರ್ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಶ್ರೀಕಾಂತ್ ಸಾಲ್ಯಾನ್ ರವರು ನಮ್ಮ ಹಿರಿಯರ ತ್ಯಾಗ, ಬಲಿದಾನಗಳಿಂದ ನಮಗೆ ದೊರೆತ ಸ್ವಾತಂತ್ರ್ಯವನ್ನು ನಾವು ಯಾವುದೇ ರೀತಿಯಲ್ಲಿಯೂ ದುರುಪಯೋಗವಾಗದಂತೆ ಸದಾ ನಮ್ಮ ದೇಶದ ಅಭಿವೃದ್ಧಿಗಾಗಿರುವ ಪ್ರಯತ್ನದಲ್ಲಿ ಕಟಿಬದ್ದರಾಗಿರಬೇಕಾಗಿದೆಯೆಂದು ಹೇಳಿದರು.

ನಂತರ ಮಾತನಾಡಿದ ಎಫ್. ಐ. ಟಿ. ಯು. ರಾಜ್ಯ ಸಲಹಾ ಸಮಿತಿಯ ಸದಸ್ಯರಾದ ಎಂ. ದಿವಾಕರ್ ರಾವ್ ಬೋಳೂರು ಸ್ವಾತಂತ್ರ್ಯ ದಿನದ ಇಂದು ನಮ್ಮ ದೇಶವನ್ನು  ನಾವು ಭ್ರಷ್ಟಚಾರ ನಿರ್ಮೂಲನೆ ಮಾಡಲು ಪಣ ತೊಟ್ಟು ನಮ್ಮಿಂದ ರಾಷ್ಟ್ರವನ್ನು ಭ್ರಷ್ಟಮುಕ್ತಗೊಳಿಸಲು ಸಾಧ್ಯವಾಗಬೇಕಿದೆಯೆಂದು ಹೇಳಿದರು.

ಪಕ್ಷದ ವಕ್ತಾರ ಅರಫಾ ಮಂಚಿ, ಜಿಲ್ಲಾ ಉಪಾಧ್ಯಕ್ಷೆ ಮರಿಯಂ ಶಹೀರ ಸಂಧರ್ಭೋಚಿತವಾಗಿ ಮಾತನಾಡಿದ ನಂತರ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಅಡ್ವೊಕೇಟ್ ಸರ್ಪರಾಜ್  ನಮ್ಮ ಹಿರಿಯರ ತ್ಯಾಗ-ಬಲಿದಾನಗಳಿಂದ ಬಳುವಳಿಯಾಗಿ ಬಂದ ನಮ್ಮ ಸ್ವಾತಂತ್ರ್ಯದ ಅಶಯಗಳಾದ ದೇಶದ ಪ್ರಜಾಪ್ರಭುತ್ವ, ಸರ್ವಧರ್ಮ ಸಮಾನತೆ, ನ್ಯಾಯ, ಸಹಿಷ್ಣುತೆ ಹೀಗೆ ನಮ್ಮ ಸಂವಿಧಾನದ ಮೂಲ ತತ್ವಗಳು ಮೌಲ್ಯಹೀನವಾಗದಂತೆ ಕಾಪಾಡಿಕೊಳ್ಳಬೇಕಾಗಿರುವುದು ನಮ್ಮೆಲ್ಲರ ಹೊಣೆಯಾಗಿದೆಯೆಂದು ಹೇಳಿದರು.

ವೆಲ್ಫೇರ್ ಪಕ್ಷದ  ಜಿಲ್ಲಾ ಸಮಿತಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಕಾರ್ಯಕರ್ತರು ಸಮಾರಂಭದಲ್ಲಿ ಭಾಗಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News