ಉಡುಪಿ: ಆ.16ರಂದು ಕೊರೋನ ಲಸಿಕೆ ಲಭ್ಯತೆ ವಿವರ
ಉಡುಪಿ, ಆ.16: ಉಡುಪಿ ಜಿಲ್ಲೆಯಲ್ಲಿ ಆ.16ರಂದು ಮೊದಲ ಮತ್ತು ಎರಡನೇ ಡೋಸ್ ಕೋವಿಡ್ ಲಸಿಕೆ ಲ್ಯವಿದ್ದು, ವಿವರ ಈ ಕೆಳಕಂಡಂತಿದೆ.
ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಸೇಂಟ್ ಸಿಸಿಲಿ ಶಾಲಾ ಲಸಿಕಾ ಕೇಂದ್ರದಲ್ಲಿ ಕೋವಿಶೀಲ್ಡ್ ಪ್ರಥಮ ಮತ್ತು ಎರಡನೇ ಡೋಸ್ ಒಟ್ಟು -300, ಮಣಿಪಾಲ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಮಾಧವ ಕೃಪಾ ಶಾಲೆಯಲ್ಲಿ ಕೋವಿಶೀಲ್ಡ್ 1ನೇ ಡೋಸ್ -200, ಕೋವಿಶೀಲ್ಡ್ 2ನೇ ಡೋಸ್-400, ಕೆಎಸ್‌ವಿಕೆ ಹಿರಿಯ ಪ್ರಾಥಮಿಕ ಶಾಲೆ ಮೂಡಬೆಟ್ಟು ಕೊಡವೂರು ಇಲ್ಲ್ಲಿ ಕೋವಿಶೀಲ್ಡ್ ಪ್ರಥಮ ಮತ್ತು ಎರನಡೇ ಡೋಸ್ ಒಟ್ಟು -250.
ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹನುಮಂತ ನಗರ ಇಲ್ಲಿ ಕೋವಿಶೀಲ್ಡ್ ಪ್ರಥಮ ಮತ್ತು ಎರಡನೇ ಡೋಸ್ ಒಟ್ಟು -250, ಕುಕ್ಕಿಕಟ್ಟೆ ಎಫ್‌ಪಿಎಐನ ಇಂದಿರಾನಗರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೋವಿಶೀಲ್ಡ್ ಪ್ರಮಥ ಮತ್ತು 2ನೇ ಡೋಸ್ ಒಟ್ಟು -200, ಉಡುಪಿ ಸರಕಾರಿ ತಾಯಿ ಮತ್ತು ಮಕ್ಕಳ (ಬಿ.ಆರ್.ಎಸ್)ಆಸ್ಪತ್ರೆಯಲ್ಲಿ ಸೆ.5ರೊಳಗೆ ವಿದೇಶ ಪ್ರಯಾಣ ಮಾಡುವವರಲ್ಲಿ ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದು 28 ದಿನಗಳು ಮೀರಿದವರಿಗೆ 2ನೇ ಡೋಸ್ ಕೋವಿಶೀಲ್ಡ್ ಲಸಿಕೆ 300 ಡೋಸ್ ಲ್ಯವಿದೆ. ಸಮಯ ಬೆಳಗ್ಗೆ 10 ರಿಂದ ಅಪರಾಹ್ನ 1 ರವರೆಗೆ.
ಗ್ರಾಮೀಣ ಪ್ರದೇಶದಲ್ಲಿ 18 ವರ್ಷ ಮೇಲ್ಪಟ್ಟವರು ಕೋವಿಡ್-19 ಪ್ರಥಮ ಮತ್ತು 2ನೇ ಡೋಸ್ ಲಸಿಕೆ ಪಡೆಯಲು ಹತ್ತಿರದ ಸರಕಾರಿ ಆಸ್ಪತ್ರೆ/ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಲಸಿಕೆ ಲಭ್ಯತೆಯನ್ನು ಖಚಿತಪಡಿಸಿಕೊಂಡು ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯಬೇಕು. ಅದೇ ರೀತಿ ಪ್ರಥಮ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದು 84 ದಿನಗಳು ಮೀರಿದ ಎಲ್ಲಾ ಫಲಾನುಭವಿಗಳು 2ನೇ ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ಇಂದು ಲಸಿಕಾ ಕೇಂದ್ರದಲ್ಲಿ ಪಡೆಯ ಬಹುದು ಎಂದು ಡಿಎಚ್‌ಓ ಡಾ.ನಾಗಭೂಷಣ ಉಡುಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.