ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ನೌಕರರಿಂದ ಧರಣಿ
ಉಡುಪಿ, ಆ.16: ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಶಿಫಾರಸ್ಸು ಮಾಡಿ ರುವ 3.39 ಕೋಟಿ ರೂ. ಅನುದಾನ ಬಿಡುಗಡೆ ಹಾಗೂ ಮೊಟ್ಟೆ ಖರೀದಿಯಲ್ಲಿ ಆಗಿರುವ ಸಚಿವರ ಭ್ರಷ್ಟಚಾರದ ತನಿಖೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಸಮಿತಿ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೆೀರಿ ಎದುರು ಧರಣಿ ನಡೆಸಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಸುಶೀಲಾ ನಾಡ, ತಾಯಿ ಮತ್ತ ಮಕ್ಕಳ ಹೆಸರಿನಲ್ಲಿ ಶೂನ್ಯ ಶುಲ್ಕದ ಉಪಖಾತರಗಳನ್ನು ತೆರೆಯುವ ಪ್ರಸ್ತಾಪವನ್ನು ನಿಲ್ಲಿಸಬೇಕು. ಕೊರೋನದಿಂದ ನಿಧನರಾದ ಕಾರ್ಯಕರ್ತೆ ಅಥವಾ ಸಹಾಯಕಿ ಕುಟುಂಬದವರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಬೇಕು. ಕೊರೊನಾ ಸೋಂಕಿನಿಂದ ಮೃತರಾದ ನೌಕರರ ಕುಟುಂಬಕ್ಕೆ 30ಲಕ್ಷ ರೂ. ಪರಿಹಾರ, ಕೊರೊನಾ ರಿಸ್ಕ್ ಅಲೋವೆನ್ಸ್ 10,000 ರೂ., ಕೊರೊನಾ ಕೆಲಸದ ಒತ್ತಡದಿಂದ ಮೃತಪಟ್ಟವರ ಕುಟುಂಬಕ್ಕೆ ಒಂದು ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಅಂಗನವಾಡಿ ಫಲಾನುಭವಿಗಳಿಗೆ ಕೊಡುವ ಪೌಷ್ಟಿಕ ಆಹಾರ ಕಿಟ್ ರೂಪ ದಲ್ಲಿ ನೀಡಬೇಕು. ಅನುಕಂಪದ ಆಧಾರದಲ್ಲಿ ಕೆಲಸ ಕೊಡುವಾಗ ಮಗಳು ಬದಲಿಗೆ ಕುಟುಂಬ ಎಂದು ಬದಲಿಸಬೇಕು. 15ದಿನಗಳ ಬೇಸಗೆ ರಜೆ ಮಳೆಗಾಲದಲ್ಲಿ ನೀಡಬೇಕು ಅಥವಾ 15ದಿನಗಳ ಗೌರವಧನ ಹೆಚ್ಚುವರಿಯಾಗಿ ನೀಡಬೇಕು. ಅಂಗನವಾಡಿ ಕೇಂದ್ರದಲ್ಲಿ ಪೂರ್ವ ಶಿಕ್ಷಣ ಕಡ್ಡಾಯಗೊಳಿಸಿ, ಐಸಿಡಿಎಸ್ ಕೆಲಸ ಹೊರತುಪಡಿಸಿ ಉಳಿದೆಲ್ಲ ಕೆಲಸಗಳಿಂದ ಮುಕ್ತಗೊಳಿಸಿ, ಅಂಗನವಾಡಿ ಕೇಂದ್ರಗಳನ್ನು ಶಿಶುಪಾಲನಾ ಕೇಂದ್ರಗಳನ್ನಾಗಿಸುವ ಉನ್ನತೀಕರಿ ಸುವ ಅವೈಜ್ಞಾನಿಕ ಕ್ರಮ ಕೈಬಿಡಬೇಕು ಎಂದು ಅವರು ಆಗ್ರಹಿಸಿದರು.
ನಿವೃತ್ತರಾದ ಅಂಗನವಾಡಿ ನೌಕಕರಿಗೆ ಬಾಕಿಯಿರುವ ಇಡುಗಂಟು ನೀಡ ಬೇಕು. ಜೇಷ್ಠತೆಯ ಆಧಾರದಲ್ಲಿ ವೇತನ ನಿಗದಿ, ಮುಂಬಡ್ತಿ, ವರ್ಗಾವಣೆ, ಪೌಷ್ಠಿಕ ಆಹಾರ ಸರಬರಾಜು ಮಾಡುವ ಎಂಎಸ್‌ಪಿಟಿಸಿಗಳಲ್ಲಿ ರಾಜಕೀಯ ಮಧ್ಯಪ್ರವೇಶವನ್ನು ತಡೆಯಬೇಕು. ಐಸಿಡಿಎಸ್ ಯೋಜನೆ ಅನುದಾನವನ್ನು ಹೆಚ್ಚಳ ಮಾಡಬೇಕು. ಬಜೆಟ್‌ನಲ್ಲ್ಲಿ ಕಡಿತವಾಗಿರುವ 8452.38 ಕೋ.ರೂ. ವಾಪಾಸ್ಸು ನೀಡಬೇಕು ಎಂದು ಅವರು ಒತ್ತಾಯಿಸಿದರು.
ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಿಗೆ ಸಲ್ಲಿಸಲಾಯಿತು. ಧರಣಿಯಲ್ಲಿ ಸಂಘದ ಜಿಲ್ಲಾಧ್ಯಕ್ಷೆ ಭಾರತಿ, ಖಜಾಂಚಿ ಯಶೋಧಾ, ಉಡುಪಿ ತಾಲೂಕು ಅಧ್ಯಕ್ಷೆ ಅಂಬಿಕಾ, ಕೋಶಾಧಿಕಾರಿ ಪ್ರಮೀಳಾ, ಉಪಾಧ್ಯಕ್ಷೆ ಅನಿತಾ ರಾವ್, ಪುಷ್ಪಾ, ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ ೊದಲಾದವರು ಉಪಸ್ಥಿತರಿದ್ದರು.