ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದಿಂದ ಸ್ವಾತಂತ್ರ್ಯ ದಿನಾಚರಣೆ
ಮಂಗಳೂರು : ನಗರದ ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ವತಿಯಿಂದ 75 ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮ ನಗರದ ಟಾಗೋರ್ ಪಾರ್ಕ್ ನ ಲ್ಲಿ ನಡೆಯಿತು.
ಪ್ರತಿಷ್ಠಾನದ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷ ಪ್ರಭಾಕರ ಶ್ರೀಯಾನ್ ರ ಅಧ್ಯಕ್ಷತೆಯಲ್ಲಿ ಸರಳ ಸಭಾ ಕಾರ್ಯಕ್ರಮ ನಡೆಯಿತು.
ಮುಖ ಭಾಷಣಕಾರರಾಗಿ ಆಗಮಿಸಿದ ಮಂಗಳೂರು ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ಕೆ.ವಿ.ರಾಘವೇಂದ್ರ ಮಾತನಾ ಡುತ್ತಾ, ದೇಶದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟ ಗಾರರು ದೇಶಕ್ಕಾಗಿ ಮಾಡಿದ ತ್ಯಾಗ ಬಲಿದಾನ ಅವಿಸ್ಮರಣೀಯ. ಈ ಬಾರಿ ಕೊರೋನಾ ಸೋಂಕು ನಮ್ಮನ್ನು ಕಾಡಿದ ಸಂದರ್ಭದಲ್ಲಿ ಕೊರೋನಾ ವಾರಿಯರ್ಸ್ ಗಳಾಗಿ ಮುಂದೆ ಬಂದವರೂ ತ್ಯಾಗಮಯಿಗಳು ಸ್ವಾತಂತ್ರ್ಯ ದಿನದ ಈ ಸಂದರ್ಭದಲ್ಲಿ ನಾವು ಅವರ ಸೇವೆಗೂ ಕ್ರತಜ್ಞತೆ ಸಲ್ಲಿಸ ಬೇಕಾಗಿದೆ ಎಂದು ಅವರು ಸ್ವಾತಂತ್ರ್ಯ ದಿನದ ಸಂದೇಶ ನೀಡಿದರು.
ಸಮಾರಂಭದಲ್ಲಿ ಹಾಜಿ ಇಬ್ರಾಹಿಂ ಕೋಡಿ ಜಾಲ್ ಸ್ವಾತಂತ್ರ್ಯ ದಿನದ ಶುಭಾಶಯ ಕೋರಿದರು.ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಇಸ್ಮಾಯಿ ಲ್ .ಎನ್ ಸ್ವಾಗತಿಸಿದರು. ಶಿಕ್ಷಕಿಯರಾದ ಉಷಾ, ಅನಿತಾ,ಸೀಮಾ, ನುಸ್ರತ್ ದೇಶಭಕ್ತಿ ಗೀತೆಗಳನ್ನು ಹಾಡಿದರು. ಪ್ರೇಮಚಂದ್ ವಂದಿಸಿದರು.