×
Ad

ವಿಶೇಷ ಮಕ್ಕಳ ಶಾಲೆಯಲ್ಲಿ ಹಣ್ಣು ಹಂಪಲು ವಿತರಣೆ

Update: 2021-08-16 21:54 IST

ಉಡುಪಿ, ಆ.16: ತಾಜುಲ್ ಉಲಮಾ ರಿಲೀಪ್ ಸೆಲ್ ಎಸ್‌ಎಸ್‌ಎಫ್ ಉಡುಪಿ ಡಿವಿಷನ್ ವತಿಯಿಂದ 74ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ ಉಪ್ಪೂರಿನ ಸ್ಪಂದನ ವಿಶೇಷ ಮಕ್ಕಳ ಶಾಲೆಯಲ್ಲಿ ಹಣ್ಣು ಹಂಪಲು ವಿತರಿಸಲಾಯಿತು.

ಈ ಮೊದಲು ಎಸ್‌ಎಸ್‌ಎಫ್ ಉಡುಪಿ ಡಿವಿಷನ್ ಕಛೇರಿ ಅಂಬಾಗಿಲು ಇಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ತಾಜುಲ್ ಉಲಮಾ ರಿಲೀಪ್ ಸೆಲ್ ಅಧ್ಯಕ್ಷ ರಝಾಕ್ ಉಸ್ತಾದ್ ದುವಾ ನೆರವೇರಿಸಿದರು. ಸೆಲ್‌ನ ಕನ್ವೀನರ್ ನಾಸೀರ್ ಭದ್ರಗಿರಿ ಸ್ವಾಗತಿಸಿದರು. ಡಿವಿಷನ್ ಕಲ್ಚರಲ್ ಕೌನ್ಸಿಲ್ ಕಾರ್ಯದರ್ಶಿ ಮಜೀದ್ ಕಟಪಾಡಿ, ಡಿವಿಷನ್ ಕೋಶಾದಿಕಾರಿ ನಝೀರ್ ಸಾಸ್ತಾನ, ಡಿವಿಷನ್ ಹಾಗೂ ಸೆಲ್‌ನ ನಾಯಕರಾದ ಸಲ್ಮಾನ್ ಮಣಿಪುರ, ನವಾಝ್ ಉಡುಪಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News