×
Ad

ಕೋಯನಗರ ಬದ್ರುಲ್ ಹುದಾ ಮಹಾಸಭೆ

Update: 2021-08-16 21:58 IST

ಬೈಂದೂರು, ಆ.16: ಕೋಯನಗರ ಬದ್ರುಲ್ ಹುದಾ ವೆಲ್ಫೇರ್ ಅಸೋಸಿ ಯೇಷನ್ ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಕೋಯನಗರ ನೂರುಲ್ ಹುದಾ ಮಸೀದಿಯಲ್ಲಿ ನಡೆಯಿತು.

ಸ್ಥಳೀಯ ಅಧ್ಯಾಪಕ ಮುನೀರ್ ಸಖಾಫಿ ಸುಳ್ಯ ದುವಾ ನೆರವೇರಿಸಿದರು. ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಮುಹಮ್ಮದ್ ಸಮೀರ್ ಮುಲ್ಲಾ ವಹಿಸಿ ದ್ದರು. ಇಖ್ಬಾಲ್ ದಾರಿಮಿ ಉದ್ಘಾಟಿಸಿದರು. ಬಳಿಕ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಅಶ್ರಫ್ ಚೆಂಗಲ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಸ್ಸಲಾಂ ಬಡಾಕೆರೆ, ಕೋಶಾಧಿಕಾರಿಯಾಗಿ ನೌಶಾದ್ ಸಿಲ್ವರ್ ಕಾಲೋನಿ, ಸಂಯೋಜಕ ರಾಗಿ ಇಖ್ಬಾಲ್ ದಾರಿಮಿ, ಉಪಾಧ್ಯಕ್ಷರುಗಳಾಗಿ ಅಡ್ವಕೇಟ್ ಇಲ್ಯಾಸ್ ಹಾಗೂ ಅಬ್ದುಲ್ ವಹ್ಹಾಬ್, ಕಾರ್ಯದರ್ಶಿಗಳಾಗಿ ಸಮೀರ್ ಮುಲ್ಲಾ ಹಾಗೂ ಕೆ.ಎಂ. ಇರ್ಷಾದ್, ಲೆಕ್ಕ ಪರಿಶೋಧಕರಾಗಿ ಅಶ್ಫಾಕ್ ಅಹ್ಮದ್, ಇಬ್ರಾಹಿಂ ಹಾಗೂ ಅಬ್ದುಲ್ ಮಜೀದ್ ಅವರನ್ನು ಆಯ್ಕೆ ಮಾಡಲಾಯಿತು.

ಎಸ್.ಎಂ.ಎ.ನಾವುಂದ ರೀಜಿನಲ್ ಅಧ್ಯಕ್ಷ ಅಬ್ದುಸ್ಸತ್ತಾರ್, ಎಸ್. ವೈ.ಎಸ್. ಶಾಖೆ ಅಧ್ಯಕ್ಷ ಇರ್ಷಾದ್ ಟಿ.ಎಂ.ಸಿ, ಹಿರಿಯರಾದ ಮುಹ ಮ್ಮದಲೀ ಹಾಜಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News