×
Ad

ತಲಪಾಡಿ: ರಕ್ತದಾನ ಶಿಬಿರ

Update: 2021-08-16 23:35 IST

ಉಳ್ಳಾಲ: ಸೋಶಿಯಲ್ ಅಚೀವ್ ಮೆಂಟ್ ಫಾರ್ಮ್, ಮ್ಯಾನ್ ಶೋ ತಲಪಾಡಿ , ಪಿ ಎಫ್ ಸಿ , ಹೀರೋಸ್ , ಟಿಎಫ್ ಸಿ  ತಲಪಾಡಿ ಮತ್ತು ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಇವುಗಳ ಜಂಟಿ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ 75 ನೇ ಸ್ವಾತಂತ್ರ್ಯ ಪ್ರಯುಕ್ತ ರಕ್ತದಾನ ಶಿಬಿರವು ತಲಪಾಡಿಯಲ್ಲಿ  ನಡೆಯಿತು.

ಕಾರ್ಯಕ್ರಮ ವನ್ನು ಉಳ್ಳಾಲ ಇನ್ಸ್ ಪೆಕ್ಟರ್ ಸಂದೀಪ್ ಉದ್ಘಾಟಿಸಿ ಮಾತನಾಡಿ ಸ್ವಾತಂತ್ರ್ಯ ದಿನದಂದು ರಕ್ತದಾನ ಶಿಬಿರ ಹಮ್ಮಿಕೊಂಡಿರು ವುದು ಶ್ಲಾಘನೀಯ.ಇದಕ್ಕೆ ಎಲ್ಲಾ ಸಂಘಟನೆ ಗಳ ಸಹಕಾರ ಅಗತ್ಯ ಎಂದರು.

ಈ ಸಂದರ್ಭದಲ್ಲಿ  ಅವರನ್ನು  ಸೋಶಿಯಲ್ ಅಚೀವ್ ಮೆಂಟ್ ಫಾರ್ಮ್ ಪ್ರ.ಕಾರ್ಯದರ್ಶಿ ಶಬೀರ್ ತಲಪಾಡಿ ಸನ್ಮಾನಿಸಿ,  ಗೌರವಿಸಿದರು. ಕಾರ್ಯಕ್ರಮದಲ್ಲಿ ಮುಹಮ್ಮದ್ ಪಿಎಚ್, ರಹೀಂ ಯುಬಿಎಂ, ಇಬ್ರಾಹಿಂ ಟಿ.ಎಂ. ಅಬ್ದುಲ್ ರಹ್ಮಾನ್, ಐಸನ್ ತಲಪಾಡಿ ಅಯ್ಯೂಬ್ ಪಿಎಫ್ ಸಿ, ಪಂಚಾಯತ್ ಸದಸ್ಯ ರಾದ ಇಸ್ಮಾಯಿಲ್ ಟಿ., ಅಬ್ದುಲ್ ರಹಿಮಾನ್, ಜಾಫರ್, ಹಸನ್ ಪೂಮಣ್ಣು, ಝಾಕೀರ್ ಟಿ.ಕೆ  ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News