×
Ad

ಮಂಗಳೂರು: ಮತ್ತೆ ಪ್ರತ್ಯಕ್ಷವಾದ ಸಾವರ್ಕರ್ ಬ್ಯಾನರ್ !

Update: 2021-08-17 11:40 IST

ಮಂಗಳೂರು: ನಗರದ ಎರಡು ಭಾಗದಲ್ಲಿ ಮತ್ತೆ  ಸಾವರ್ಕರ್ ಬ್ಯಾನರ್ ಪತ್ತೆಯಾಗಿದೆ.

ನಗರದ ಪಂಪ್‌ವೆಲ್‌ ಮೇಲ್ಸೇತುವೆ ಮೇಲೆ ಸೋಮವಾರ ತಡರಾತ್ರಿ "ವೀರ ಸಾವರ್ಕರ್ ಮೇಲ್ಸೇತುವೆ ಪಂಪ್‌ವೆಲ್" ಎಂಬ ಬ್ಯಾನರ್ ಹಾಕಲಾಗಿತ್ತು.

ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ಬರುವ ರಸ್ತೆ ಬದಿ (ಇಂಡಿಯಾನಾ ಆಸ್ಪತ್ರೆ ಎದುರು) ಬ್ಯಾನರ್ ಅಳವಡಿಸಲಾಗಿತ್ತು. ನಂತರ ಕೆಲ ಅಪರಿಚಿತ ವ್ಯಕ್ತಿಗಳು ಸ್ಕೂಟರ್‌ನಲ್ಲಿ ಬಂದು ಬ್ಯಾನರ್ ತೆರವುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೊಂದೆಡೆ ಮಂಗಳವಾರ ಜಂಕ್ಷನ್ ರೈಲು ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲೂ "ವೀರ ಸಾವರ್ಕರ್ ರೈಲು ನಿಲ್ದಾಣ ಮಂಗಳೂರು" ಎಂಬ ಬ್ಯಾನರ್ ಹಾಕಲಾಗಿದೆ. ಬಳಿಕ ತೆರವುಗೊಂಡಿದೆ.

ಕೆಲವು ತಿಂಗಳ ಹಿಂದೆಯೂ ಪಂಪ್‌ವೆಲ್ ಮೇಲ್ಸೇತುವೆ ಮೇಲೆ "ವೀರ ಸಾವರ್ಕರ್ ಮೇಲ್ಸೇತುವೆ" ಎಂದು ಬರೆಯಲಾಗಿತ್ತು. ಅದು ಸಾರ್ವಜನಿಕ ವಲಯದಲ್ಲಿ ಚರ್ಚೆಗೂ ಗ್ರಾಸವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News