ಸೂಪರ್ ಸ್ಟಾರ್ ಸ್ಪೋರ್ಟ್ಸ್ ಕ್ಲಬ್ ಮಂಚಿ, ಕೊಳ್ನಾಡ್ ವತಿಯಿಂದ ಸ್ವಾತಂತ್ರ್ಯ ಸಂಭ್ರಮಾಚರಣೆ
ಬಂಟ್ವಾಳ, ಆ.17: ಸೂಪರ್ ಸ್ಟಾರ್ ಸ್ಪೋರ್ಟ್ಸ್ ಕ್ಲಬ್ ಮಂಚಿ, ಕೊಳ್ನಾಡು ಇದರ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವವನ್ನು ಸಂಸ್ಥೆಯ ಕಚೇರಿ ಆವರಣದಲ್ಲಿ ಆಚರಿಸಲಾಯಿತು.
ಕೊಳ್ನಾಡು ಮಂಚಿ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಸುಶೀಲಾ ವಿಟ್ಲ ಅವರು ಧ್ವಜಾರೋಹಣಗೈದು ಸ್ವಾತಂತ್ರ್ಯ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯ ಮುಹಮ್ಮದ್ ಮಂಚಿ ಅವರು ಮಾತನಾಡಿ, ಕ್ಲಬ್ ನ ಉದ್ದೇಶ ಮತ್ತು ಪ್ರೌಢ ಶಾಲೆಯ ನಿವೃತ್ತ ಮತ್ತು ಹಾಲಿ ಮುಖ್ಯೋಪಾಧ್ಯಾಯರ ಕನಸುಗಳನ್ನು ವಿವರಿಸಿದರು. ಮುಂದಿನ ದಿನಗಳಲ್ಲಿ ಪ್ರೌಢ ಶಾಲೆಯ ಕಾರ್ಯಕ್ರಮದಲ್ಲಿ ಸುಪರ್ ಸ್ಟಾರ್ ಸ್ಪೋರ್ಟ್ಸ್ ಕ್ಲಬ್ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸರಕಾರಿ ಪ್ರೌಢ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರಾಮಮೂರ್ತಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನೂಜಿಬೈಲ್ ಶಾಲಾ ಮುಖ್ಯೋಪಾಧ್ಯಾಯ ಲೊಕನಾತ್ ಬಿ., ದಿವಾಕರ್ ನಾಯಕ್, ಮುಹಮ್ಮದ್ ಮೂಸಾ, ಜಯಂತ್ ಕುಮಾರ್, ಪುರಂದರ ಸಾಲ್ಯಾನ್, ಗೋಪಾಲ ಕೃಷ್ಣ ದೇವಸ್ಥಾನ ಮಂಚಿ ಕೊಳ್ನಾಡು ಇದರ ಅಧ್ಯಕ್ಷ ರಾಜೇಶ್ ಶೆಟ್ಟಿ, ರಿಫಾಯಿಯಾ ಜುಮಾ ಮಸೀದಿ ಮಂಚಿ ಕೊಳ್ನಾಡು ಇಲ್ಲಿನ ಪದಾಧಿಕಾರಿಗಳಾದ ಇಬ್ರಾಹೀಂ ಎಂ.ಕೆ., ಹನೀಫ್ ಎಂ.ಎ., ಬಷೀರ್, ನಿಸಾರ್ ಮಂಚಿ, ದಾವೂದ್ ಕೈಯೂರು ಮೊದಲಾದವರು ಉಪಸ್ಥಿತರಿದ್ದರು.