‘‘ನಮ್ಮ ಸಮಾಜ ರಕ್ಷಿಸಲು ನಾವೇ ಪೊಲೀಸರಾಗಿಬಿಡುತ್ತೇವೆ’’ ವನರಾಜ್ ಭಟ್ ಕೆದಿಲ
ಮಂಗಳೂರು, ಆ. 17: ಎಳನೀರು ಕೆತ್ತುವ, ಹೊಟೇಲ್‌ಗಳಲ್ಲಿ ಕ್ಲೀನರ್ ಆಗಿ, ರಿಕ್ಷಾದಲ್ಲಿ ಮಕ್ಕಳನ್ನು ಕರೆದೊಯ್ಯುವ, ಮೊಬೈಲ್ ಕರೆನ್ಸಿ ಹಾಕುವ ಸೇರಿದಂತೆ ನಾನಾ ರೂಪದಲ್ಲಿ ಜಿಹಾದಿ ಶಕ್ತಿಗಳಿವೆ ಎಂದು ಹಿಂದೂ ಜಾಗರಣ ವೇದಿಕೆಯ ಮುಖಂಡ ಗಣರಾಜ್ ಭಟ್ ಕೆದಿಲ ಹೇಳಿಕೆ ನೀಡಿದ್ದಾರೆ.
ಹಂಪನಕಟ್ಟೆಯ ಕ್ಲಾಕ್ ಟವರ್ ಸಮೀಪ ಇಂದು ಹಿಂದೂ ಜಾಗರಣ ವೇದಿಕೆಯ ಮಂಗಳೂರು ಘಟಕದ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಹೊತ್ತಿಸುವುದಾಗಿ ಹೇಳಿಕೆ ನೀಡಿರುವ ಶಾಸಕ ಯು.ಟಿ.ಖಾದರ್‌ರವರ ಮಾತುಗಳೇ ಜಿಹಾದಿ ಶಕ್ತಿಗಳಿಗೆ ಪ್ರೇರಕವಾಗಿದೆ ಎಂದರು.
ವಿವಿಧ ರೂಪದಲ್ಲಿ ಹಿಂದೂಗಳನ್ನು ಉಗ್ರಗಾಮಿ ರೂಪಕ್ಕೆ ಎಳೆಯುವವರಿದ್ದಾರೆ. ಹಿಂದೂ ತರುಣಿಯರ ಮನವೊಲಿಸಿ ತಮ್ಮ ಬಲೆಗೆ ಬೀಳಿಸಿಕೊಂಡು ಬಳಿಕ ಅವರಿಂದ ದೇಶದ್ರೋಹದ ಕೆಲಸವನ್ನು ಮಾಡಲಾಗುತ್ತಿದೆ. ನಮ್ಮ ಸಮಾಜವನ್ನು ರಕ್ಷಿಸುವ ಹೊಣೆಗಾರಿಕೆ ನಮಗಿದೆ ಜಾಗೃತಿಯಾಗುತ್ತದೆ, ನಾವೇ ಪೊಲೀಸರಾಗಿಬಿಡುತ್ತೇವೆ. ನಮ್ಮ ಸಮಾಜವನ್ನು ನಾವೇ ರಕ್ಷಿಸುತ್ತೇವೆ, ಅದಕ್ಕೆ ಅವಕಾಶ ಬೇಡ ಎಂದು ಅವರು ಹೇಳಿದರು.
ವೀರ ಸಾರ್ವಕರ್‌ಗೆ ಅವಮಾನ ಮಾಡುವುದು ದೇಶ ಧ್ವಜಕ್ಕೆ ಅವಮಾನುವುದರಲ್ಲಿ ಬೇಧವಿಲ್ಲ. ಜಿಹಾದಿ ಶಕ್ತಿಗಳಿಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾವುದೂ ಕಾಣುವುದಿಲ್ಲ. ಅವರಿಗೆ ನೋಟ ಇರುವುದು ಕೇವಲ ಹಿಂದುತ್ವ ಎಂದು ಗಣರಾಜ್ ಭಟ್ ಹೇಳಿದರು. ಹರೀಶ್ ಕುಮಾರ್, ಸತೀಶ್, ಸಂದೀಪ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.