×
Ad

ಹಿಂದುಳಿದ ವರ್ಗಗಳು ಅವಕಾಶ ಬಳಸಿಕೊಂಡು ಸಂಘಟಿತರಾಗುವುದು ಅಗತ್ಯ: ನರೇಂದ್ರ ಬಾಬು

Update: 2021-08-17 20:11 IST

ಉಡುಪಿ, ಆ.17: ಹಿಂದುಳಿದ ವರ್ಗದವರು ಅವಕಾಶಗಳನ್ನು ಉಪಯೋಗಿ ಸಿಕೊಂಡು ಮತ್ತಷ್ಟು ಸಂಘಟಿತರಾಗಬೇಕು. ಈ ಮೂಲಕ ಕಟ್ಟ ಕಡೆಯ ಭಾರತೀಯನಿಗೂ ಸಮಾನ ಅವಕಾಶ ಲಭಿಸಬೇಕು ಎಂದು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ನೆ.ಲ.ನರೇಂದ್ರ ಬಾಬು ಹೇಳಿದ್ದಾರೆ.

ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕೈಗಾರಿಕಾ ಕ್ರಾಂತಿಯ ಬಳಿಕ ದೇಶದ ಶೇ.55ರಷ್ಟು ಜನಸಂಖ್ಯೆ ಅವಕಾಶ ಗಳಿಂದ ವಂಚಿತವಾಗಿದೆ. ಸ್ವಾತಂತ್ರ ಸಿಕ್ಕಿದ ಬಳಿಕವೂ ಈ ಸಮುದಾಯಕ್ಕೆ ನ್ಯಾಯ ಸಿಕ್ಕಿದೆಯೇ ಎಂಬ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಹಲವು ಸಮುದಾಯಗಳು ಶಿಕ್ಷಣ ಸಹಿತ ಹಲವಾರು ಸೌಲಭ್ಯಗಳಿಂದ ವಂಚಿತವಾಗಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಸುರೇಂದ್ರ ಪಣಿಯೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಕುಯಿ ಲಾಡಿ ಸುರೇಶ್ ನಾಯಕ್, ರಾಷ್ಟ್ರೀಯ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ, ಮೋರ್ಚಾ ಪ್ರಭಾರಿ ರೇಷ್ಮಾ ಉದಯ ಶೆಟ್ಟಿ, ಉಪಾಧ್ಯಕ್ಷ ಸುರೇಶ್ ಬಾಬು, ಕಾರ್ಯದರ್ಶಿ ವಿಠಲ ಪೂಜಾರಿ, ಕಾರ್ಯಕಾರಿಣಿ ಸದಸ್ಯ ಸುರೇಶ್ ಕುಮಾರ್ ಉಪಸ್ಥಿತರಿದ್ದರು.

ಜ್ಯೋತಿ ಹರೀಶ್ ಸ್ವಾಗತಿಸಿದರು. ಅರುಣ್ ಬಾಣಾ ವಂದಿಸಿದರು. ಸತೀಶ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News