ಫರಂಗಿಪೇಟೆಯಲ್ಲಿ 'ಮೆಡೋಕ್ ವಿಷನ್ ಕೇರ್'ನ ನೂತನ ಶಾಖೆ ಶುಭಾರಂಭ
ಬಂಟ್ವಾಳ, ಆ.17: ಕಣ್ಣಿನ ಹಾರೈಕೆ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವ ಹಾಗೂ ಪರಂಪರೆಯೊಂದಿಗೆ ಕಾರ್ಯಾಚರಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಅತೀ ದೊಡ್ಡ ಒಪ್ಟಿಕಲ್ ಸಂಸ್ಥೆ 'ಮೆಡೋಕ್ ವಿಷನ್ ಕೇರ್'ನ ನೂತನ ಶಾಖೆ ಫರಂಗಿಪೇಟೆಯ ಬಸ್ ಸ್ಟ್ಯಾಂಡ್ ಬಳಿ ಸೋಮವಾರ ಶುಭಾರಂಭಗೊಂಡಿತು.
ಮಳಿಗೆಯನ್ನು ಶಾಸಕ ಯು.ಟಿ.ಖಾದರ್ ಉದ್ಘಾಟಿಸಿ ಶುಭ ಹಾರೈಸಿದರು. ಫರಂಗಿಪೇಟೆ ಜುಮಾ ಮಸೀದಿ ಖತೀಬ್ ಅಬ್ಬಾಸ್ ದಾರಿಮಿ ದುಅ ನೆರವೇರಿಸಿದರು.
ಈ ಸಂದರ್ಭದಲ್ಲಿ ಪುದು ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಆಡಳಿತ ಪಾಲುದಾರರಾದ ಝಿರಾರ್ ಅಬ್ದುಲ್ಲಾ, ಇರ್ಷಾದ್ ಮುಹಮ್ಮದ್ ಫೈಝ್, ನಿಝಾಂ ಹಾಗೂ ಸ್ಥಳೀಯ ಮುಖಂಡರು ಮತ್ತು ನಾಗರಿಕರು ಉಪಸ್ಥಿತರಿದ್ದರು.
ಉದ್ಘಾಟನೆಯ ಪ್ರಯುಕ್ತ 20 ಮಂದಿಗೆ ಉಚಿತವಾಗಿ ಕನ್ನಡವನ್ನು ವಿತರಿಸಲಾಯಿತು. ಅಲ್ಲದೆ ಆಗಸ್ಟ್ 31ರ ವರೆಗೆ ಎಲ್ಲಾ ತರದ ಕನ್ನಡಕಗಳಿಗೆ 25 ಶೇ. ವಿಶೇಷ ರಿಯಾಯಿತಿ ನೀಡಲಾಗುತ್ತಿದೆ.
ಫರಂಗಿಪೇಟೆ ಶಾಖೆಯಲ್ಲಿರುವ ಸೌಲಭ್ಯಗಳು: ಮಕ್ಕಳಲ್ಲಿ ಕಾಣುವ ಕೆಂಗಣ್ಣು ಮತ್ತು ದೃಷ್ಟಿದೋಷ ಪರೀಕ್ಷೆ, ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿ ಉಂಟಾಗುವ ದೃಷ್ಟಿ ಹೀನತೆ ತಲೆನೋವು ಪರೀಕ್ಷೆ, 40 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ಚಿಕ್ಕದಾದ ಅಕ್ಷರಗಳನ್ನು ಓದುವ ತೊಂದರೆಯ ಪರೀಕ್ಷೆ, 50ಕ್ಕಿಂತ ಮೇಲ್ಪಟ್ಟ ಜನರಲ್ಲಿ ಕಣ್ಣಿನ ಪೊರೆ ಪರೀಕ್ಷೆ, ಇತರ ಎಲ್ಲಾ ದೃಷ್ಟಿ ದೋಷಗಳ ಪರೀಕ್ಷೆ, ಪ್ರತೀ ದಿನ ಬೆಳಗ್ಗೆ 10ರಿಂದ ಸಂಜೆ 7ರ ವರೆಗೆ ಉಚಿತ ದೃಷ್ಟಿ ಪರೀಕ್ಷಾ ಸೌಲಭ್ಯ, ಅತ್ಯಾಧುನಿಕ ದೃಷ್ಟಿ ಪರೀಕ್ಷೆಯ ಉಪಕರಣಗಳು, ಕನ್ನಡಕದ ಫ್ರೇಮ್ ಗಳ ಸನ್ ಗ್ಲಾಸ್ ಗಳಿರುವ ಫರಂಗಿಪೇಟೆಯ ಅತೀ ದೊಡ್ಡ ಕೇಂದ್ರ, ಮಕ್ಕಳಿಗಾಗಿ ಪ್ರತ್ಯೇಕ ವಿಭಾಗ, ಆನ್ ಲೈನ್ ಕಲಿಕೆಗಾಗಿ ಅಗತ್ಯ ಇರುವ ಪವರ್ ಇಲ್ಲದ ಕನ್ನಡಕಗಳು 699 ರೂಪಾಯಿಯಿಂದ ಲಭ್ಯ, 40 ವರ್ಷ ಮೇಲ್ಪಟ್ಟವರಿಗೆ ಸಣ್ಣ ಅಕ್ಷರಗಳು ಓದಲಿರುವ ತೊಂದರೆ ನೀಗಿಸಲು ರೀಡಿಂಗ್ ಗ್ಲಾಸ್ ಗಳು ಲಭ್ಯ, ದೃಷ್ಟಿ ಪರೀಕ್ಷಿಸಿ ಕನ್ನಡಕಗಳನ್ನು ಅದೇ ದಿನದಲ್ಲಿ ಸಿದ್ಧಪಡಿಸಿ ಕೊಡಲಾಗುವುದು, ಪೊರೆಯ ಶಸ್ತ್ರ ಕ್ರಿಯೆಗಳಿಗೂ ಉಚಿತ ಮೆಡಿಕಲ್ ಕ್ಯಾಂಪ್ ಗಳಿಗೂ ಒದಗಿಸಿಕೊಡಲಾಗುವುದು, ಕನ್ನಡಕ ಖರೀದಿಸಿದ ಅಂದಿನಿಂದ ಒಂದು ವರ್ಷದ ವರೆಗೆ ಉಚಿತವಾಗಿ ಸರಿ ಮಾಡಿ ಕೊಡಲಾಗುವುದು, 150 ರೂಪಾಯಿಯಿಂದ ಕಾಂಟೆಕ್ಟ್ ಲೆನ್ಸ್ ಗಳು ಲಭ್ಯ ಇವೆ.