×
Ad

ನಾಪತ್ತೆಯಾಗಿದ್ದ ರಿಕ್ಷಾ ಚಾಲಕ ಆತ್ಮಹತ್ಯೆ

Update: 2021-08-17 21:42 IST

ಕುಂದಾಪುರ ಆ. 17: ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಆಟೋ ರಿಕ್ಷಾ ಚಾಲಕ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ವಕ್ವಾಡಿ- ಕಾಳಾವರ ರಸ್ತೆ ಸಮೀಪದ ಸರಕಾರಿ ಹಾಡಿಯಲ್ಲಿ ನಡೆದಿದೆ.

ಮೃತರನ್ನು ವಕ್ವಾಡಿ ನವನಗರದ ಆನಂದ ಕುಲಾಲ ಎಂಬವರ ಮಗ ರವಿಚಂದ್ರ ಕುಲಾಲ್(32) ಎಂದು ಗುರುತಿಸಲಾಗಿದೆ. ವಕ್ವಾಡಿ ರಿಕ್ಷಾ ನಿಲ್ದಾಣದಲ್ಲಿ ರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದ ಇವರು, ಆ.16ರಂದು ಮಧ್ಯಾಹ್ನ ತನ್ನ ರಿಕ್ಷಾವನ್ನು ವಕ್ವಾಡಿ ನವನಗರ ತಿರುವಿನಲ್ಲಿ ನಿಲ್ಲಿಸಿ ನಾಪತ್ತೆಯಾಗಿದ್ದರು.

ಹುಡುಕಾಡಿದಾಗ ಮಂಗಳವಾರ ಬೆಳಿಗ್ಗೆ ವಕ್ವಾಡಿ ಗುರುಕುಲ ಶಾಲೆಯ ಸಮೀಪ ಹಾಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ರವಿಚಂದ್ರ ಕುಲಾಲ್ ಮೃತದೇಹ ಪತ್ತೆಯಾಗಿದೆ. ಇವರು ಆರ್ಥಿಕ ಸಮಸ್ಯೆ ಹಾಗೂ ಬೇರೆ ಸಮಸ್ಯೆ ಯಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿ ರುವುದಾಗಿ ದೂರಿ ನಲ್ಲಿ ತಿಳಿಸಲಾಗಿದೆ. ವಿವಾಹಿತರಾಗಿದ್ದ ರವಿಚಂದ್ರ ಕುಲಾಲ್ ಅವರಿಗೆ 8 ತಿಂಗಳ ಗಂಡು ಮಗುವಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News