×
Ad

ಎಂಸಿಸಿ ಬ್ಯಾಂಕ್‌ನ ಹವಾನಿಯಂತ್ರಿತ ಸಂಸ್ಥಾಪಕರ ಶಾಖೆ ಉದ್ಘಾಟನೆ

Update: 2021-08-17 21:57 IST

ಮಂಗಳೂರು, ಆ.17: ಎಂಸಿಸಿ ಬ್ಯಾಂಕ್‌ನ ನವೀಕೃತ ಹವಾನಿಯಂತ್ರಿತ ಸಂಸ್ಥಾಪಕರ ಶಾಖೆಯನ್ನು ಶಾಖೆಯ ಉಸ್ತುವಾರಿ ನಿರ್ದೇಶಕ ಡೊಲ್ಫಿ ಜೆ. ಪತ್ರಾವೊ ಉದ್ಘಾಟಿಸಿದರು.

ಬ್ಯಾಂಕ್‌ನ ಗ್ರಾಹಕರಿಗೆ ಮತ್ತು ಹಿರಿಯ ಗ್ರಾಹಕರಿಗೆ ನೆರವಾಗುವ ಸಲುವಾಗಿ ಒಂದು ಮತ್ತು ಎರಡನೇ ಮಹಡಿಗೆ ತೆರಳಲು ನಿರ್ಮಿಸಿದ ಹೊಸ ‘ಲಿಪ್ಟ್’ ವ್ಯವಸ್ಥೆಯನ್ನು ಬ್ಯಾಂಕ್‌ನ ಅಧ್ಯಕ್ಷ ಅನಿಲ್ ಲೋಬೊ ಉದ್ಘಾಟಿಸಿದರು. ನವೀಕೃತ ಹವಾನಿಯಂತ್ರಿತ ಶಾಖೆ, ವಿಶ್ರಾಂತಿ ಕೊಠಡಿ ಹಾಗೂ ಹೊಸ ಎಟಿಎಂ ಯಂತ್ರವನ್ನು ಮಿಲಾಗ್ರಿಸ್ ಚರ್ಚಿನ ಧರ್ಮಗುರು ವಂ. ಬೊನವೆಂಚರ್ ನಜರತ್ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು ಗ್ರಾಹಕರನ್ನು ನಗುಮೊಗದಿಂದ ಬರಮಾಡಿ ಕೊಂಡು ಉತ್ತಮ ಸೇವೆ ನೀಡಿದರೆ ಬ್ಯಾಂಕ್ ಯಶಸ್ಸಿಯ ಶಿಖರ ತಲುಪಲಿದೆ ಎಂದರು.

ನವೀಕೃತ ಶಾಖೆಯ ಕನ್ಸಲ್ಟಿಂಗ್‌ಇಂಜಿನಿಯರ್ ಕಾರ್ತಿಕ್‌ಕಿರಣ್‌ರನ್ನು ಗೌರವಿಸಲಾಯಿತು. ಬ್ಯಾಂಕ್‌ನ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ, ನಿರ್ದೇಶಕ ಆ್ಯಂಡ್ರು ಡಿಸೋಜ, ಡೇವಿಡ್ ಡಿಸೋಜ, ಐರಿನ್‌ರೆಬೆಲ್ಲೊ, ಡಾ. ಫ್ರೀಡಾ ಫ್ಲೇವಿಯಾ ಡಿಸೋಜ, ಅನಿಲ್ ಪತ್ರಾವೊ, ರೋಶನ್ ಡಿಸೋಜ, ಹೆರಾಲ್ಡ್ ಮೊಂತೇರೊ,ಮಾರ್ಸೆಲ್ ಡಿಸೋಜ, ವೃತ್ತಿಪರ ನಿರ್ದೇಶಕ ಸಿ.ಜಿ. ಪಿಂಟೊ, ಮೈಕಲ್‌ಡಿಸೋಜ, ಮಾಜಿ ಅಧ್ಯಕ್ಷ ಮತ್ತು ಕಾನೂನು ಸಲಹೆಗಾರ ಎಂ.ಪಿ. ನೊರೊನ್ಹಾ, ಮಹಾಪ್ರಬಂಧಕ ಸುನಿಲ್ ಐ.ಮಿನೇಜಸ್, ಉಪ ಮಹಾಪ್ರಬಂಧಕ ರಾಜ್‌ಎಫ್. ಮಿನೇಜಸ್ ಉಪಸ್ಥಿತರಿದ್ದರು.

ಶಾಖಾ ವ್ಯವಸ್ಥಾಪಕ ಬ್ಲಾಂಚ್ ಫೆರ್ನಾಂಡಿಸ್ ವಂದಿಸಿದರು. ಬ್ಯಾಂಕ್‌ನ ಸಿಬ್ಬಂದಿ ಶೈನಿ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News