ಎಸ್ ಡಿಪಿಐ, ಪಿಎಫ್ಐ ನಿಷೇಧಿಸಲು ಸಿ.ಎಂ ಬಳಿ ಶಾಸಕರ ನಿಯೋಗ -ಡಾ.ಭರತ್ ಶೆಟ್ಟಿ
Update: 2021-08-17 22:43 IST
ಮಂಗಳೂರು : ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಪುತ್ತೂರಿನ ಕಬಕದಲ್ಲಿ ಸಾವರ್ಕರ್ ಅವರ ಭಾವ ಚಿತ್ರದ ರಥವನ್ನು ತಡೆದು ಎಸ್ ಡಿಪಿಐ ಸಂಘಟನೆಯ ಸದಸ್ಯರು ಸಾಮರಸ್ಯ ಕದಡುವ ಕೆಲಸದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ಆರೋಪಿಸಿದ್ದಾರೆ. ಇಂತಹ ಚಟುವಟಿಕೆಗಳಲ್ಲಿ ತೊಡಗಿರುವ ಪಿಎಫ್ಐ ಮತ್ತುಎಸ್ ಡಿಪಿಐ ಯನ್ನು ರಾಜ್ಯದಲ್ಲಿ ನಿಷೇಧಿಸಲು ಕರಾವಳಿಯ ಬಿಜೆಪಿಯ ಶಾಸಕರು ಮತ್ತು ಮುಖಂಡ ರನ್ನೊಳಗೊಂಡ ನಿಯೋಗ ರಾಜ್ಯದ ಮುಖ್ಯ ಮಂತ್ರಿಗೆ ಮನವಿ ಸಲ್ಲಿಸಲಿದೆ ಮತ್ತು ಗೃಹ ಸಚಿವರೊಂದಿಗೆ ಸಮಾಲೋಚನೆ ನಡೆಸಲಿದೆ ಎಂದುಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.