ಕ್ರೊಯೇಶಿಯಾದ ಫುಟ್ಬಾಲ್ ಕ್ಲಬ್ ಸೇರಲಿದ್ದಾರೆಯೇ ಭಾರತದ ಖ್ಯಾತ ಆಟಗಾರ?

Update: 2021-08-18 08:20 GMT
ಸಂದೇಶ್ ಜಿಂಗನ್ (Photo:Twitter@IndianFootball)

ಹೊಸದಿಲ್ಲಿ: ಕ್ರೊಯೇಶಿಯಾದಲ್ಲಿ ಫುಟ್ಬಾಲ್ ಕ್ಲಬ್ ಆಡಲು ಡಿಫೆಂಡರ್ ಸಂದೇಶ್ ಜಿಂಗನ್ ಅವರನ್ನು ರಾಷ್ಟ್ರೀಯ ಬದ್ಧತೆಗಳಿಂದ ಬಿಡುಗಡೆ ಮಾಡಲು ತಾನು ಪರಿಗಣಿಸಬಹುದು ಎಂದು ಭಾರತೀಯ ಪುರುಷರ ತಂಡದ ತರಬೇತುದಾರ ಇಗೊರ್ ಸ್ಟಿಮಾಕ್ ಮಂಗಳವಾರ ಹೇಳಿದ್ದಾರೆ.

ಜಿಂಗನ್ ಕ್ರೊಯೇಶಿಯಾದ ಫಸ್ಟ್ ಡಿವಿಷನ್ ಲೀಗ್ (Prva HNL) ಕ್ಲಬ್ ಎಚ್ ಎನ್ ಕೆ ಸಿಬಿನಿಕಾ ಗೆ ಸೇರುವ ನಿರೀಕ್ಷೆಯಿದೆ. ಯುರೋಪಿನಲ್ಲಿ ಆಡುವ ಅವಕಾಶ ಸಿಕ್ಕರೆ ಜಿಂಗನ್ ಪ್ರಸ್ತುತ ಕ್ಲಬ್ ಎಟಿಕೆ ಮೋಹನ್ ಬಗಾನ್ ಅನ್ನು ತೊರೆಯಲು ಅವಕಾಶ ನೀಡುತ್ತದೆ.

"ಕ್ರೊಯೇಷಿಯಾದ ಲೀಗ್ ಈಗಾಗಲೇ ಐದು ಸುತ್ತುಗಳನ್ನು ಹೊಂದಿದ್ದು, ಆಟಗಾರರು ಫಿಟ್ ಆಗಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಸಂದೇಶ್ ಅವರನ್ನು ಆದಷ್ಟು ಬೇಗನೆ ಫಾರ್ಮ್‌ಗೆ ಬರಲು ನಾವು ಹೇಗೆ ಸಹಾಯ ಮಾಡಬಹುದೆಂದು ಯೋಚಿಸುತ್ತಿದ್ದೇವೆ ಹಾಗೂ ತಂಡದಲ್ಲಿ ಸ್ಥಾನ ಪಡೆಯಲು ಅನುಕೂಲವಾಗುವಂತೆ ಪ್ರಯತ್ನಿಸುತ್ತೇವೆ’’ ಎಂದು ಸ್ಟಿಮಾಕ್ ಹೇಳಿದರು.

"ಅವರು ಆಡುವ ಬಳಗಕ್ಕೆ ಪ್ರವೇಶಿಸುವುದು ಮುಖ್ಯವಾಗಿದೆ. ಆದ್ದರಿಂದ ನಾವು ಅವರನ್ನು ಶಿಬಿರದಿಂದ ಬಿಡುಗಡೆ ಮಾಡಿ ವಾಪಸ್ ಕರೆತರುವುದನ್ನು ಪರಿಗಣಿಸಬಹುದು ಆದರೆ ಕ್ಲಬ್‌ನೊಂದಿಗೆ ಉಳಿಯಲು ಅವಕಾಶ ನೀಡುತ್ತೇವೆ" ಎಂದು ಸ್ಟಿಮ್ಯಾಕ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News