ಅಫ್ಘಾನಿಸ್ತಾನ : ಹೆರಾತ್ ನಗರದಲ್ಲಿ ಶಾಲೆಗೆ ಮರಳಿದ ವಿದ್ಯಾರ್ಥಿನಿಯರು

Update: 2021-08-18 18:14 GMT

ಹೆರಾತ್ (ಅಫ್ಘಾನಿಸ್ತಾನ), ಆ. 18: ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ದಿನಗಳ ಬಳಿಕ ಪಶ್ಚಿಮದ ನಗರ ಹೆರಾತ್‌ನಲ್ಲಿ ಹಿಜಾಬ್ ಮತ್ತು ನಿಲುವಂಗಿಗಳನ್ನು ಧರಿಸಿದ ಬಾಲಕಿಯರು ತರಗತಿಗಳಿಗೆ ವಾಪಸಾಗಿದ್ದಾರೆ.

ಶಾಲೆಯ ಬಾಗಿಲು ತೆರೆದಂತೆಯೇ ವಿದ್ಯಾರ್ಥಿಗಳು ಶಾಲೆಯ ಆವರಣಕ್ಕೆ ಬಂದಿದ್ದು ತರಗತಿಗಳ ಮುಂಭಾಗದಲ್ಲಿ ಸಂಭಾಷಣೆಯಲ್ಲಿ ತೊಡಗಿದರು. ಕಳೆದ ಎರಡು ವಾರಗಳಲ್ಲಿ ದೇಶದಲ್ಲಿ ಸಂಭವಿಸಿರುವ ವಿಪ್ಲವಗಳ ಬಗ್ಗೆ ಅರಿವಿಲ್ಲದಂತೆ ಮಕ್ಕಳು ಕಂಡುಬಂದರು.

ಈ ದೃಶ್ಯಗಳನ್ನು ಎಎಫ್‌ಪಿ ಸುದ್ದಿ ಸಂಸ್ಥೆಯ ಕ್ಯಾಮರಾಮನ್ ಒಬ್ಬರು ಸೆರೆಹಿಡಿದಿದ್ದಾರೆ.

‘‘ನಾವು ಇತರ ದೇಶಗಳಂತೆ ಅಭಿವೃದ್ಧಿ ಹೊಂದಲು ಬಯಸುತ್ತೇವೆ’’ ಎಂದು ರೋಖಿಯಾ ಎಂಬ ವಿದ್ಯಾರ್ಥಿನಿ ಹೇಳಿದರು. ‘‘ದೇಶದ ಭದ್ರತೆಯನ್ನು ತಾಲಿಬಾನ್ ನಿಭಾಯಿಸುತ್ತದೆ ಎಂದು ನಾವು ಭಾವಿಸುತ್ತೇವೆ. ನಮಗೆ ಯುದ್ಧ ಬೇಕಾಗಿಲ್ಲ. ನಮಗೆ ನಮ್ಮ ದೇಶದಲ್ಲಿ ಶಾಂತಿ ಬೇಕು’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News