×
Ad

ಕಾಬೂಲ್‌ನಿಂದ 85 ಕ್ಕೂ ಹೆಚ್ಚು ಭಾರತೀಯರನ್ನು ಸ್ಥಳಾಂತರಿಸಿದ ವಾಯುಪಡೆಯ ವಿಶೇಷ ವಿಮಾನ: ವರದಿ

Update: 2021-08-21 11:53 IST
ಸಾಂದರ್ಭಿಕ ಚಿತ್ರ, photo: AFP

ಹೊಸದಿಲ್ಲಿ: ವಾಯುಪಡೆಯ ಸಿ -130 ಜೆ ಸಾರಿಗೆ ವಿಮಾನವು ಕಾಬೂಲ್‌ನಿಂದ 85 ಜನರೊಂದಿಗೆ ಇಂದು ಬೆಳಿಗ್ಗೆ ಹೊರಟಿತು ಎಂದು ಸುದ್ದಿಸಂಸ್ಥೆ ANI ವರದಿ ಮಾಡಿದೆ.

ಕೇಂದ್ರ ಸರಕಾರವು  ಅಫ್ಘಾನಿಸ್ತಾನ ರಾಜಧಾನಿಯಿಂದ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಪ್ರಯತ್ನ ಮುಂದುವರಿಸಿದೆ.

ವಿಮಾನವನ್ನು ಇಂಧನ ತುಂಬಿಸಲು ತಜಕಿಸ್ತಾನದಲ್ಲಿ ಇಳಿಸಲಾಯಿತು ಎಂದು ಮೂಲಗಳನ್ನು ಉಲ್ಲೇಖಿಸಿ ANI  ತಿಳಿಸಿದೆ.

ಭಾರತವು ಎಲ್ಲಾ ರಾಜತಾಂತ್ರಿಕ ಸಿಬ್ಬಂದಿಯನ್ನು ಸ್ಥಳಾಂತರಿಸಿದೆ.  ಆದರೆ ಸುಮಾರು 1,000 ನಾಗರಿಕರು ಯುದ್ಧ ಪೀಡಿತ ದೇಶದ ಹಲವಾರು ನಗರಗಳಲ್ಲಿ ಉಳಿದಿದ್ದಾರೆ. ಅವರ ಸ್ಥಳ ಹಾಗೂ ಸ್ಥಿತಿಯನ್ನು ಖಚಿತಪಡಿಸಿಕೊಳ್ಳುವುದು ಸವಾಲಾಗಿ ಪರಿಣಮಿಸುತ್ತಿದೆ. ಏಕೆಂದರೆ ಅವರೆಲ್ಲರೂ ತಮ್ಮನ್ನು ದೂತಾವಾಸದಲ್ಲಿ ನೋಂದಾಯಿಸಿಕೊಂಡಿಲ್ಲ  ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News