ಚೆನ್ನೈ: ಬಹುಭಾಷಾ ನಟಿ ಚಿತ್ರಾ ನಿಧನ

Update: 2021-08-21 07:26 GMT
photo: The new Indian express

ಚೆನ್ನೈ: ಬಹುಭಾಷಾ ನಟಿ ಚಿತ್ರಾ ಶನಿವಾರ ಬೆಳಗ್ಗೆ ಚೆನ್ನೈನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ವರದಿಯಾಗಿದೆ. ಅವರಿಗೆ  56 ವರ್ಷ ವಯಸ್ಸಾಗಿತ್ತು.

ತಮಿಳು ಕಿರುತೆರೆಯಲ್ಲಿ ಜನಪ್ರಿಯರಾಗಿದ್ದ ಈ ನಟಿ ಮಲಯಾಳಂ, ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ 100 ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದರು. ಕನ್ನಡದಲ್ಲಿ ಸುಂದರ ಸ್ವಪ್ನಗಳು, ಅಜೇಯ್-ವಿಜಯ್, ಕೃಷ್ಣ ಮೆಚ್ಚಿದ ರಾಧೆ ಚಿತ್ರಗಳಲ್ಲಿ ನಟಿಸಿದ್ದಾರೆ.

ಕಲಿಕ್ಕಾಲಂ (1990), ದೇವಾಸುರಂ (1993) ಹಾಗೂ ಪದಮುದಯಂ (1985) ಚಿತ್ರಗಳಲ್ಲಿನ ಪಾತ್ರಗಳಲ್ಲಿ ಚಿತ್ರಾ ಅವರು ಗಮನ ಸೆಳೆದಿದ್ದರು.

1983 ರಲ್ಲಿ ಚೊಚ್ಚಲ ಚಿತ್ರ 'ಆಟಕಲಶಂ' ನಲ್ಲಿ ಪ್ರೇಮ್ ನಝೀರ್ ಮತ್ತು ಮೋಹನ್ ಲಾಲ್ ಜೊತೆಯಲ್ಲಿ ನಟಿಸಿದ್ದರು.

ಚಿತ್ರಾ 1965 ರಲ್ಲಿ ಕೊಚ್ಚಿಯಲ್ಲಿ ಜನಿಸಿದ್ದರು. ಚಿತ್ರೋದ್ಯಮಕ್ಕೆ ಕಾಲಿಡುವ ಮೊದಲು  ಅವರು ತನ್ನ ಶಿಕ್ಷಣವನ್ನು 10 ನೇ ತರಗತಿಯವರೆಗೆ ಮುಗಿಸಿದ್ದರು.

ಅವರು 1990 ರಲ್ಲಿ ವಿಜಯರಾಘವರನ್ನು ವಿವಾಹವಾಗಿದ್ದರು. ಪತಿ ವಿಜಯರಾಘವ ಹಾಗೂ ಪುತ್ರಿ ಮಹಾಲಕ್ಷ್ಮಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News