10,000 ಮೀಟರ್ ರೇಸ್ ವಾಕ್‌ನಲ್ಲಿ ಬೆಳ್ಳಿ ಗೆದ್ದ ಭಾರತದ ಅಮಿತ್

Update: 2021-08-21 07:44 GMT
photo: TWITTER|@AFIINDIA

ನೈರೋಬಿ: ಭಾರತದ ಅಮಿತ್ ಅವರು ನೈರೋಬಿಯಲ್ಲಿ ಶನಿವಾರ ನಡೆದ ವಿಶ್ವ ಅಂಡರ್-20 ಚಾಂಪಿಯನ್‌ಶಿಪ್‌ನಲ್ಲಿ ಪುರುಷರ 10,000 ಮೀಟರ್ ರೇಸ್ ವಾಕ್ ನಲ್ಲಿ 42 ನಿಮಿಷ 17.94 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಕಾರಣ ಬೆಳ್ಳಿ ಪದಕ ಗೆದ್ದರು.

ಚಿನ್ನದ ಪದಕ ವಿಜೇತ ಕೀನ್ಯಾದ ಹೆರಿಸ್ಟೋನ್ ವನ್ಯೋನಿ 42: 10.84 ಸಮಯದಲ್ಲಿ ಗುರಿ ತಲುಪಿದರು. ಭಾರತ ಯುವ ರೇಸ್ ವಾಕರ್ ಅಮಿತ್  ರೇಸ್ ನ ಹೆಚ್ಚಿನ ಅವಧಿಯಲ್ಲಿ ಮುನ್ನಡೆ ಸಾಧಿಸಿದ್ದರು. ಆದರೆ ಕೊನೆಯಲ್ಲಿ ಹಿನ್ನಡೆ ಕಂಡರು. ಸ್ಪೇನ್ ನ ಪಾಲ್ ಮೆಗ್ರಾತ್ 42: 26.11 ಸಮಯದೊಂದಿಗೆ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.

ಅಮಿತ್ ಈ ವರ್ಷದ ಆರಂಭದಲ್ಲಿ 10 ,000 ಮೀ. ವಾಕಿಂಗ್‌ನಲ್ಲಿ ಹೊಸ ರಾಷ್ಟ್ರೀಯ ಅಂಡರ್-20 ದಾಖಲೆಯನ್ನು ನಿರ್ಮಿಸಿದ್ದರು. ಅಮಿತ್ ಅವರು 18 ನೇ ರಾಷ್ಟ್ರೀಯ ಫೆಡರೇಶನ್ ಕಪ್‌ನಲ್ಲಿ 40: 40.97 ಸಮಯದಲ್ಲಿ ಗುರಿ ತಲುಪಿ ಪ್ರಶಸ್ತಿಯನ್ನು ಗೆದ್ದಿದ್ದರು.

ಈಗ ನಡೆಯುತ್ತಿರುವ ವಿಶ್ವ ಅಂಡರ್-20 ಚಾಂಪಿಯನ್‌ಶಿಪ್‌ನಲ್ಲಿ ಭಾರತ ಗೆದ್ದಿರುವ ಎರಡನೇ ಪದಕ ಇದಾಗಿದೆ, ಈ ವಾರದ ಆರಂಭದಲ್ಲಿ 4x400 ಮೀಟರ್ ರಿಲೇ ತಂಡವು ಕಂಚಿನ ಪದಕವನ್ನು ಗೆದ್ದಿತ್ತು.

ಮಿಶ್ರ ರಿಲೇ ಓಟದಲ್ಲಿ ಭಾರತದ  ಭರತ್ ಎಸ್, ಪ್ರಿಯಾ ಮೋಹನ್, ಸಮ್ಮಿ ಹಾಗೂ  ಕಪಿಲ್ 3 ನಿಮಿಷ 20.60 ಸೆಕೆಂಡುಗಳಲ್ಲಿ ಕ್ರಮಿಸಿ ಫೈನಲ್‌ನಲ್ಲಿ ಮೂರನೇ ಸ್ಥಾನ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News