ತಾಲಿಬಾನ್ ನಿಂದ ಕರೆದೊಯ್ಯಲ್ಪಟ್ಟ ಎಲ್ಲಾ ಭಾರತೀಯರ ಬಿಡುಗಡೆ:ವರದಿ
Update: 2021-08-21 13:59 IST
ಹೊಸದಿಲ್ಲಿ: ಕಾಬೂಲ್ ವಿಮಾನ ನಿಲ್ದಾಣದ ಹೊರಗಿನಿಂದ ತಾಲಿಬಾನ್ ನಿಂದ ಕರೆದೊಯ್ಯಲ್ಪಟ್ಟಿರುವ ಸುಮಾರು 150 ಭಾರತೀಯ ಪ್ರಜೆಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು NDTV ಗೆ ತಿಳಿಸಿವೆ.
ಕಾಬೂಲ್ ನ ಹಾಮೀದ್ ಕರ್ಜೈ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ತಾಯ್ನಾಡಿಗೆ ತೆರಳಲು ಕಾಯುತ್ತಿದ್ದ ಸುಮಾರು 150 ಭಾರತೀಯರನ್ನು ಶನಿವಾರ ಮುಂಜಾನೆ ಕಾಬೂಲ್ ವಿಮಾನ ನಿಲ್ದಾಣದ ಗೇಟ್‌ಗಳ ಹೊರಗಿನಿಂದ ತಾಲಿಬಾನ್‌ಗಳು ಟ್ರಕ್‌ಗಳಲ್ಲಿ ಕರೆದೊಯ್ದಿದ್ದರು.
ತಾಲಿಬಾನ್‍ನಿಂದ ವಶಕ್ಕೆ ಪಡೆದಿರುವ ಭಾರತೀಯರಿಗೆ ಯಾವುದೇ ಅಪಾಯವಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಅಫ್ಘಾನ್ ಮಾಧ್ಯಮ ತಿಳಿಸಿದೆ ಎಂದು ಎಎನ್ ಐ ವರದಿ ಮಾಡಿದೆ.