'ಕುದ್ರೋಳಿ ಆಟೋ ರಿಕ್ಷಾ ಪಾರ್ಕ್' ನೂತನ ಪದಾಧಿಕಾರಿಗಳ ಆಯ್ಕೆ
Update: 2021-08-21 17:31 IST
ಮಂಗಳೂರು : ಕುದ್ರೋಳಿ ಆಟೋ ರಿಕ್ಷಾ ಚಾಲಕರ ಮಹಾಸಭೆಯು ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆಯಿತು.
ಸಭೆಯಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿ ಆಟೋ ಪಾರ್ಕ್ ನಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಮುಂದಿನ 2021-2022ರ ಅವಧಿಗೆ ನೂತನ ಸಮಿತಿಯನ್ನು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಝುಬೈರ್ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಅಬ್ದುಲ್ ರಹ್ಮನ್, ಪ್ರಧಾನ ಕಾರ್ಯದರ್ಶಿಯಾಗಿ ಅಮಿರುದ್ದೀನ್, ಖಜಾಂಜಿಯಾಗಿ ಹನೀಫ್ ಕುದ್ರೋಳಿ ಅವರನ್ನು ನೇಮಕ ಮಾಡಲಾಯಿತು.