ಉಡುಪಿ: ಕೊಂಕಣ ರೈಲು ನಿಲ್ದಾಣದಲ್ಲಿ ಪ್ಲ್ಯಾಟ್‌ಫಾರಂ ಶೆಲ್ಟರ್ ಉದ್ಘಾಟನೆ
Update: 2021-08-21 18:34 IST
ಉಡುಪಿ, ಆ.21: ಇಂದ್ರಾಳಿಯಲ್ಲಿರುವ ಉಡುಪಿಯ ರೈಲು ನಿಲ್ದಾಣದಲ್ಲಿ ಉಡುಪಿ ಲಯನ್ಸ್ ಕ್ಲಬ್ ಪ್ರಾಯೋಜಕತ್ವದಲ್ಲಿ ನಿರ್ಮಿಸಲಾದ ಪ್ಲ್ಯಾಟ್‌ಫಾರಂ ಶೆಲ್ಡರ್‌ನ್ನು ಶನಿವಾರ ಲಯನ್ಸ್ ಕ್ಲಬ್‌ನ ಅಂತಾರಾಷ್ಟ್ರೀಯ ನಿರ್ದೇಶಕ ವಂಶಿಧರ್ ಬಾಬು ಉದ್ಘಾಟಿಸಿದರು.
ಉಡುಪಿ ರೈಲ್ವೆ ನಿಲ್ದಾಣದ ಈ ಎರಡನೇ ಪ್ಲ್ಯಾಟ್‌ಫಾರಂ ಶೆಲ್ಟರ್ ಉದ್ಘಾಟನೆ ವೇಳೆ ಜಿಲ್ಲಾ ಗವರ್ನರ್ ವಿಶ್ವನಾಥ ಶೆಟ್ಟಿ, ಮಾಜಿ ಅಂತಾರಾಷ್ಟ್ರೀಯ ನಿರ್ದೇಶಕ ವಿ.ವಿ.ಕೃಷ್ಣಾ ರೆಡ್ಡಿ, ಕೆ.ಸಿ.ವೀರಭದ್ರಪ್ಪ, ಮಾಜಿ ಜಿಲ್ಲಾ ಗವರ್ನರ್ ಜಯಕರ ಶೆಟ್ಟಿ, ಜಿಲ್ಲಾ ಖಜಾಂಚಿ ಜಯಪ್ರಕಾಶ್ ಭಂಡಾರಿ, ಪ್ರಕಾಶ್ ಭಂಡಾರಿ ಹಾಗೂ ಇತರರು ಉಪಸ್ಥಿತರಿದ್ದರು.
ಕೊಂಕಣ ರೈಲ್ವೆಯ ಮಂಗಳೂರು ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ ಅವರು ಅತಿಥಿಗಳನ್ನು ಸ್ವಾಗತಿಸಿದರೆ, ವಿಭಾಗ ಇಂಜಿನಿಯರ್ ಬಿ.ಎಂ.ವೆಂಕಟೇಶ್ ವಂದಿಸಿದರು. ಹರೀಶ್ ಪೂಜಾರಿ, ಸುಧೀರ್ ಶೆಟ್ಟಿ ಉಪಸ್ಥಿತರಿದ್ದರು.