ಆದಿತ್ಯನಾಥ್ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದ ಮಾಜಿ ಐಪಿಎಸ್ ಅಧಿಕಾರಿಗೆ ಗೃಹ ಬಂಧನ

Update: 2021-08-21 16:10 GMT
photo: The Hindu

ಹೊಸದಿಲ್ಲಿ: 2022ರಲ್ಲಿ ನಡೆಯಲಿರುವ ರಾಜ್ಯವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ಈ ಹಿಂದೆ ತಮ್ಮ ಉಮೇದುವಾರಿಕೆಯನ್ನು ಘೋಷಿಸಿದ್ದ ಉತ್ತರಪ್ರದೇಶದ ಕೇಡರ್ ನ ಮಾಜಿ ಐಪಿಎಸ್ ಅಧಿಕಾರಿ ಅಮಿತಾಬ್ ಠಾಕೂರ್ ಅವರನ್ನು ಗೋರಖ್ ಪುರಕ್ಕೆ ಭೇಟಿ ನೀಡುವ ಯೋಜನೆಗೆ ಮುಂಚಿತವಾಗಿ ಆಗಸ್ಟ್ 21 ರ ಶನಿವಾರ ಗೃಹ ಬಂಧನದಲ್ಲಿರಿಸಲಾಗಿದೆ.

ವೀಡಿಯೊ ಸಂದೇಶದಲ್ಲಿ ಮಾತನಾಡಿದ ಠಾಕೂರ್ “ನಾನು  ಹೊರಡಲು ತಯಾರಿ ನಡೆಸುತ್ತಿದ್ದಾಗ, ಗೋಮತಿ ನಗರ ಪೊಲೀಸರು ಆಗಮಿಸಿದರು ಹಾಗೂ  ಭದ್ರತಾ ಕಾರಣಗಳನ್ನು ಮುಂದಿಟ್ಟುಕೊಂಡು ಯೋಜಿತ ಭೇಟಿಯನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಭೇಟಿಯನ್ನು ರದ್ದುಗೊಳಿಸುವ ಬದಲು ಭದ್ರತೆ ನೀಡುವಂತೆ ಕೇಳಿದಾಗಲೂ ಪೊಲೀಸರು ನನ್ನನ್ನು ಹೋಗಲು ಬಿಡಲಿಲ್ಲ'' ಎಂದು ಹೇಳಿದರು.

ಗೃಹ ಸಚಿವಾಲಯವು ಮಾರ್ಚ್‌ನಲ್ಲಿ ತೆಗೆದುಕೊಂಡ ನಿರ್ಧಾರದ ನಂತರ ಕಡ್ಡಾಯ ನಿವೃತ್ತಿಯನ್ನು ನೀಡಿದ ಠಾಕೂರ್ "ನನ್ನ ಭೇಟಿಯಿಂದಾಗಿ ಯೋಗಿ ಆದಿತ್ಯನಾಥ್‌ಜಿ ಹೆದರಿಕೊಂಡಿದ್ದಾರೆ' ಎಂದು ತೋರುತ್ತಿದೆ ಹಾಗೂ ನಾನು ಹಾಗೂ ನನ್ನ ಪತ್ನಿ'ಅವರಂತಹ ಎತ್ತರದ ನಾಯಕನನ್ನು ತಲ್ಲಣಗೊಳಿಸಿದ್ದು ತಮಾಷೆಯಾಗಿದೆ''  ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News