×
Ad

ವಕ್ಫ್ ಸಂಸ್ಥೆಗಳ ಖಾಲಿ ಜಮೀನಿನ ವಿವರ ನಾಮಫಲಕಗಳಲ್ಲಿ ನಮೂದಿಸಲು ಸೂಚನೆ

Update: 2021-08-21 22:22 IST

ಮಂಗಳೂರು, ಆ.21: ದ.ಕ. ಜಿಲ್ಲೆಯ ವಕ್ಫ್ ಸಂಸ್ಥೆಗಳಿಗೆ ಸೇರಿರುವ ಖಾಲಿ ಜಾಗ/ಜಮೀನುಗಳಲ್ಲಿ ವಕ್ಫ್ ಆಸ್ತಿಯ ವಿವರಗಳನ್ನು ನಾಮಫಲಕದಲ್ಲಿ ನಮೂದಿಸಲು ರಾಜ್ಯ ವಕ್ಫ್ ಮಂಡಳಿಯ ಸಿಇಒ ಸೂಚನೆ ನೀಡಿದ್ದಾರೆ.

ವಕ್ಫ್ ಆಸ್ತಿಗಳ ಸಂರಕ್ಷಣೆಯ ನಿಟ್ಟಿನಲ್ಲಿ ನಾಮಫಲಕಗಳಲ್ಲಿ ಆಸ್ತಿ ವಿವರ ನಮೂದಿಸುವುದು ಅಗತ್ಯವಾಗಿದೆ. ಹಾಗಾಗಿ 7 ದಿನಗಳ ಒಳಗೆ ವಕ್ಫ್ ಆಸ್ತಿ ಗಳಲ್ಲಿ ನಾಮಫಲಕಗಳನ್ನು ಅಳವಡಿಸಬೇಕು. ಅಲ್ಲದೆ ಈ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ ವರದಿ ಮತ್ತು ಛಾಯಚಿತ್ರಗಳನ್ನು ದ.ಕ.ಜಿಲ್ಲಾ ವಕ್ಫ್ ಕಚೇರಿ, ಅಲ್ಫಸಂಖ್ಯಾತರ ಕಲ್ಯಾಣ ಭವನದ 2ನೇ ಮಹಡಿ, ಓಲ್ಡ್ ಕೆಂಟ್ ರಸ್ತೆ, ಪಾಂಡೇಶ್ವರ, ಮಂಗಳೂರು ಇಲ್ಲಿಗೆ ಕಳುಹಿಸಿಕೊಡಬೇಕು ಎಂದು ವಕ್ಫ್ ಕಚೇರಿಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News