ಉಗಾಂಡಾ: 50ಕ್ಕೂ ಹೆಚ್ಚು ಎನ್ಜಿಒ ಮೇಲೆ ನಿಷೇಧ

Update: 2021-08-21 17:19 GMT

ಕಂಪಾಲ, ಆ.21: ಕಾನೂನು ಉಲ್ಲಂಸಿದ ಆರೋಪದಲ್ಲಿ 50ಕ್ಕೂ ಹೆಚ್ಚು ಸಾಮಾಜಿಕ ಸೇವಾ ಸಂಸ್ಥೆಗಳ ಪರವಾನಿಗೆಯನ್ನು ಉಗಾಂಡಾದ ಅಧಿಕಾರಿಗಳು ಅಮಾನತುಗೊಳಿದ್ದು ಇದರಿಂದ ಈ ಸಂಸ್ಥೆಗಳ ಸಮಾಜಸೇವಾ ಕಾರ್ಯದ ಫಲಾನುಭವಿಗಳಿಗೆ ಸಮಸ್ಯೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಉಗಾಂಡದ ಪ್ರಮುಖ ಮಾನವಹಕ್ಕು ಸಂಸ್ಥೆ ‘ ಚಾಪ್ಟರ್ 4 ಉಗಾಂಡ’, ಚುನಾವಣೆ ವೀಕ್ಷಕ ತಂಡ ಸಿಸಿಇಡಿಯು, ಮಾನವಹಕ್ಕು ಸಂಸ್ಥೆಗಳು, ಮಹಿಳಾ ಹಕ್ಕುಗಳಿಗಾಗಿ ಕಾರ್ಯನಿರ್ವಹಿಸುವ ಸಂಸ್ಥೆಗಳು ಈ ಪಟ್ಟಿಯಲ್ಲಿವೆ. ಅಮಾನತು ಆದೇಶ ತಕ್ಷಣದಿಂದ ಜಾರಿಗೆ ಬರಲಿದೆ ಎಂದು ಸರಕಾರದ ಎನ್ಜಿಒ(ಸರಕಾರೇತರ ಸಂಸ್ಥೆಗಳ) ಬ್ಯೂರೋ ಶುಕ್ರವಾರ ಘೋಷಿಸಿದೆ.

ಅವಧಿ ಮೀರಿದ್ದರೂ ಪರವಾನಿಗೆಯನ್ನು ನವೀಕರಿಸದೆ ಚಟುವಟಿಕೆ ಮುಂದುವರಿಕೆ, ಲೆಕ್ಕಪತ್ರ ದಾಖಲೆ ಸಲ್ಲಿಸದಿರುವುದು, ಪ್ರಾಧಿಕಾರದಲ್ಲಿ ನೋಂದಣಿ ಮಾಡಿಕೊಳ್ಳಲು ವಿಫಲವಾಗಿರುವುದು ಸೇರಿದಂತೆ ಹಲವು ನಿಯಮಗಳನ್ನು ಉಲ್ಲಂಸಲಾಗಿದೆ ಎಂದು ಬ್ಯೂರೋ ಹೇಳಿದೆ.

ಉಗಾಂಡಾದಲ್ಲಿ ಕಾರ್ಯನಿರ್ವಹಿಸುವ ಸೇವಾ ಸಂಸ್ಥೆಗಳಿಗೆ ದೇಣಿಗೆ ನೀಡುವ ಪ್ರಮುಖ ಸಂಸ್ಥೆ ‘ ಡೆಮೊಕ್ರಟಿಕ್ ಗವರ್ನೆನ್ಸ್ ಫೆಸಿಲಿಟಿ(ಡಿಜಿಎಫ್)ನ ಕಾರ್ಯನಿರ್ವಹಣೆಯ ಮೇಲೆ ಕೆಲ ತಿಂಗಳ ಹಿಂದೆ ನಿಷೇಧ ಹೇರಿದ ಬಳಿಕ ಸೇವಾಸಂಸ್ಥೆಗಳ ಚಟುವಟಿಕೆಗಳಿಗೆ ಹಿನ್ನಡೆಯಾಗಿತ್ತು. ದುರದೃಷ್ಟವಶಾತ್, ಪತನದತ್ತ ಸಾಗುತ್ತಿರುವ ನಮ್ಮ ಪ್ರಜಾಪ್ರಭುತ್ವದಲ್ಲಿ ಏನು ಬೇಕಾದರೂ ನಡೆಯಬಹುದು. ಪ್ರಜೆಗಳ ಹಾಗೂ ಸರಕಾರೇತರ ಸಂಸ್ಥೆಗಳ ಮೇಲಿನ ರಾಜಕೀಯ ಕಿರುಕುಳದ ಮುಂದುವರಿದ ಭಾಗ ಇದಾಗಿದೆ ಎಂದು ಸರಕಾರೇತರ ಸಂಘಟನೆಯೊಂದರ ಅಧ್ಯಕ್ಷ ಡಿಕನ್ಸ್ ಕಮುಗಿಷಾ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News