×
Ad

ವಾಯುಪಡೆ ವಿಮಾನದಲ್ಲಿ ಕಾಬೂಲ್ ನಿಂದ ಭಾರತ ತಲುಪಿದ 168 ಪ್ರಯಾಣಿಕರು

Update: 2021-08-22 10:54 IST
photo: ANI

ಕಾಬೂಲ್: ಭಾರತೀಯ ವಾಯುಪಡೆಯ ವಿಶೇಷ ವಾಪಸಾತಿ ವಿಮಾನ  107 ಮಂದಿ ಭಾರತೀಯರು ಸೇರಿದಂತೆ 168 ಪ್ರಯಾಣಿಕರನ್ನು ಹೊತ್ತುಕೊಂಡು ಕಾಬೂಲ್‌ನಿಂದ ದಿಲ್ಲಿ ಸಮೀಪದ ಗಾಝಿಯಾಬಾದ್ ನ ಹಿಂಡನ್ ವಾಯುನೆಲೆಯಲ್ಲಿ ರವಿವಾರ ಬೆಳಿಗ್ಗೆ ಬಂದಿಳಿಯಿತು.

ಹಾಗೆಯೇ, ಏರ್ ಇಂಡಿಯಾ, ಇಂಡಿಗೋ ಹಾಗೂ  ವಿಸ್ತಾರ  ವಿಮಾನಗಳು ಕಾಬೂಲ್‌ನಿಂದ ಸ್ಥಳಾಂತರಿಸಲ್ಪಟ್ಟ ಭಾರತೀಯರನ್ನು ಹೊತ್ತುಕೊಂಡು ತಜಕಿಸ್ತಾನದ ರಾಜಧಾನಿ ದುಶಾನ್‌ಬೆ ಹಾಗೂ ಖತರ್ ನ  ದೋಹಾದಿಂದ ರಾಷ್ಟ್ರ ರಾಜಧಾನಿಗೆ ಬಂದಿಳಿದವು.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಸ್ಥಳಾಂತರಿಸುವ ಪ್ರಯತ್ನಗಳ ಚಿತ್ರಗಳನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ತನ್ನ ಪ್ರಜೆಗಳನ್ನು ಸ್ಥಳಾಂತರಿಸಲು ಭಾರತವು  ಕಾಬೂಲ್‌ನಿಂದ ದಿನಕ್ಕೆ ಎರಡು ವಿಮಾನಗಳನ್ನು ಕಾರ್ಯಾಚರಣೆ ನಡೆಸಲು ಅನುಮತಿ ನೀಡಲಾಗಿದೆ ಎಂದು ಎಎನ್ಐ ವರದಿ ಮಾಡಿದೆ.

ಆಗಸ್ಟ್ 15 ರಂದು ಅಫ್ಘಾನಿಸ್ತಾನದ ರಾಜಧಾನಿ ತಾಲಿಬಾನ್ ವಶವಾದ ನಂತರ ಹಾಮೀದ್ ಕರ್ಝೈ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಗಳನ್ನು ನಿಯಂತ್ರಿಸುತ್ತಿರುವ ಅಮೆರಿಕ ಮತ್ತು ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ (ನ್ಯಾಟೋ) ಪಡೆಗಳು ಅನುಮತಿ ನೀಡಿದ್ದವು.

ಎಲ್ಲಾ ಪ್ರಯಾಣಿಕರು ಇಳಿಯುವಾಗ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗುತ್ತಿರುವುದು ಕಂಡುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News