×
Ad

ಮಿತ್ರಪಟ್ಟಣ ಮೊಗವೀರ ಮಹಾ ಸಮಾಜದ ವತಿಯಿಂದ ಸಮುದ್ರ ಪೂಜೆ

Update: 2021-08-22 12:23 IST

ಮಂಗಳೂರು : ಮಿತ್ರಪಟ್ಟಣ ಮೊಗವೀರ ಮಹಾ ಸಮಾಜದ  ವತಿಯಿಂದ ರವಿವಾರ ನಡೆದ ಸಮುದ್ರ ಪೂಜೆಯ ಕಾರ್ಯಕ್ರಮದಲ್ಲಿ  ಶಾಸಕ  ಡಾ. ಭರತ್ ಶೆಟ್ಟಿ ಸಮುದ್ರಕ್ಕೆ ಹಾಲು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ಮಿತ್ರಪಟ್ಟಣ ಮೊಗವೀರ ಸಮಾಜದ ಅಧ್ಯಕ್ಷ ರವೀಂದ್ರ ಕರ್ಕೇರ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸುರೇಶ್ ಕರ್ಕೇರ, ಸ್ಥಳೀಯ ಕಾರ್ಪೋರೇಟರ್ ಶೋಭಾ ರಾಜೇಶ್, ರಾಮ ಮಂದಿರದ ಅಧ್ಯಕ್ಷ ಪ್ರದೀಪ್ ಕುಂದರ್, ಊರಿನ ಗುರಿಕಾರರಾದ ಗಂಗಾಧರ್ ಗುರಿಕಾರ, ಹಿರಿಯರಾದ  ದಿನಕರ್ ಎಂ, ಮಹಿಳಾ ಸಮಾಜದ ಅಧ್ಯಕ್ಷರಾದ ಕವಿತಾ ಶರತ್, ರಾಜೇಶ್ ಪುತ್ರನ್ ಮುಂಬೈ ಸಮಿತಿಯ ಹಿರಿಯರಾದ ನಾರಾಯಣ ಬಂಗೇರ ಮಿತ್ರಪಟ್ಟಣ ಮೀನುಗಾರಿಕಾ ಸಹಕಾರಿ ಸಂಘದ ಅಧ್ಯಕ್ಷ ವಸಂತ್ ಸುವರ್ಣ, ಪ್ರಮುಖರಾದ ಸುನಿಲ್ ಸಾಲಿಯಾನ್ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News