×
Ad

ಅಮೆರಿಕದ ವಾಯುಪಡೆ ವಿಮಾನದಲ್ಲಿ ಮಗುವಿಗೆ ಜನ್ಮ ನೀಡಿದ ಅಫ್ಘಾನಿಸ್ತಾನದ ಮಹಿಳೆ

Update: 2021-08-22 16:48 IST
Photo: twitter.com/AirMobilityCmd

ಬರ್ಲಿನ್: ಕಾಬೂಲ್ ನಿಂದ ಜರ್ಮಿನಿಯ ರ್ಯಾಮ್ ಸ್ಟೈನ್ ವಾಯುನೆಲೆಗೆ ಬಂದಿಳಿದಿದ್ದ  ಅಮೆರಿಕ ದ ವಾಯುಪಡೆಯ ಸಿ-17 ವಿಮಾನದಲ್ಲಿ ಅಫ್ಘಾನಿಸ್ತಾನದ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಅಮೆರಿಕದ ಮಿಲಿಟರಿ ರವಿವಾರ ತಿಳಿಸಿದೆ.

ಅಫ್ಘಾನಿಸ್ತಾನದಿಂದ ಜನರನ್ನು ಸ್ಥಳಾಂತರಿಸಲು ರ್ಯಾಮ್ ಸ್ಟೈನ್ ವಾಯುನೆಲೆಯನ್ನು ಅಮೆರಿಕ ತಾತ್ಕಾಲಿಕವಾಗಿ ಬಳಸಿಕೊಳ್ಳುತ್ತಿದೆ.

ಈ ಕುರಿತಾಗಿ ಟ್ವೀಟಿಸಿರುವ ಅಮೆರಿಕ ಮಿಲಿಟರಿಯ ಏರ್ ಮೊಬಿಲಿಟಿ ಕಮಾಂಡ್ ಶನಿವಾರ ವಿಮಾನ ಹಾರಾಟದ ಸಮಯದಲ್ಲಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ವಿಮಾನ ರ್ಯಾಮ್ ಸ್ಟೈನ್ ವಾಯುನೆಲೆಗೆ ಬರುತ್ತಲ್ಲೇ ಅಮೆರಿಕದ ವೈದ್ಯಕೀಯ ಸಿಬ್ಬಂದಿ ವಿಮಾನದಲ್ಲೇ ಚಿಕಿತ್ಸೆ ಆರಂಭಿಸಿ ಹೆರಿಗೆ ಮಾಡಿಸಿದರು. ಮಹಿಳೆಗೆ ಹೆಣ್ಣುಮಗು ಜನಿಸಿದೆ. ತಾಯಿ ಹಾಗೂ ಮಗುವನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News