×
Ad

ಆ 24: ಎಸ್ಸೆಸ್ಸೆಫ್ ನಿಂದ ಕ್ಯಾಪೊ ಮೀಟ್

Update: 2021-08-22 19:22 IST

ಮಂಗಳೂರು : ಕರ್ನಾಟಕ ರಾಜ್ಯ ಸುನೀ ಸ್ಟೂಡೆಂಟ್ಸ್ ಫೆಡರೇಶನ್ ವತಿಯಿಂದ ಜಿಲ್ಲಾ ಪದಾಧಿಕಾರಿಗಳ ಕ್ಯಾಪೊ ಮೀಟ್ ಕಾರ್ಯಕ್ರಮವು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ ಅಧ್ಯಕ್ಷತೆಯಲ್ಲಿ ಆ. 24ರ ಬೆಳಗ್ಗೆ 10 ಗಂಟೆಗೆ ಮರ್ಕಝ ಸಅದ ಶಿವಮೊಗ್ಗದಲ್ಲಿ ನಡೆಯಲಿದೆ.

ಎಸ್ಸೆಸ್ಸೆಫ್ ರಾಜ್ಯ ನಾಯಕ  ಸಯ್ಯದ್ ಅಲವೀ ತಂಙಳ್ ಕರ್ಕಿ ದುವಾ ನೆರವೇರಿಸಲಿರುವರು. ಎಸ್.ವೈ.ಎಸ್   ಶಿವಮೊಗ್ಗ ಜಿಲ್ಲಾಧ್ಯಕ್ಷ ಜಬ್ಬಾರ್ ಸಅದಿ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ಹಾಫಿಲ್ ಸುಫಿಯಾನ್ ಸಖಾಫಿ ಹಾಗೂ ನೌಫಲ್ ಸಖಾಫಿ ಕಳಸ ಪ್ರಾಸ್ತಾವಿಕ ಭಾಷಣ ಮಾಡಲಿರುವರು ಎಂದು ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News