ಪ್ರಧಾನಿ ಮೋದಿ ,ವಿದೇಶಾಂಗ ಸಚಿವಾಲಯಕ್ಕೆ ಧನ್ಯವಾದ ಅರ್ಪಿಸಿದ ಕೇರಳ ಸಿಎಂ ಪಿಣರಾಯಿ ವಿಜಯನ್

Update: 2021-08-22 14:42 GMT

ತಿರುವನಂತಪುರ: ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅಫ್ಘಾನಿಸ್ತಾನದಿಂದ ಕೇರಳೀಯರನ್ನು ಒಳಗೊಂಡಂತೆ ಭಾರತೀಯ ಪ್ರಜೆಗಳನ್ನು ತೆರವುಗೊಳಿಸಿರುವುದು ಹಾಗೂ ಸ್ವದೇಶಕ್ಕೆ ಕರೆ ತಂದಿರುವುದು ಶ್ಲಾಘನೀಯ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರವಿವಾರ ಹೇಳಿದ್ದಾರೆ ಹಾಗೂ  ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ವಿಜಯನ್ ಅವರು  ಟ್ವೀಟ್ ನಲ್ಲಿ ವಿದೇಶಾಂಗ ಸಚಿವಾಲಯ ಹಾಗೂ  ಮೋದಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು ಹಾಗೂ  ನೆರವು ಅಗತ್ಯವಿರುವ ಕೇರಳಿಗರು ನಾರ್ಕಾ ರೂಟ್ ಅಥವಾ ವಿದೇಶಾಂಗ ಸಚಿವಾಲಯದ 24x7 ವಿಶೇಷ ಅಫ್ಘಾನಿಸ್ತಾನ ಸೆಲ್ ಅನ್ನು ಸಂಪರ್ಕಿಸಬಹುದು ಎಂದು ಹೇಳಿದರು.

ಕಾಬೂಲ್‌ನಿಂದ ತನ್ನ ನಾಗರಿಕರನ್ನು ಸ್ಥಳಾಂತರಿಸುವ ಪ್ರಯತ್ನದ ಭಾಗವಾಗಿ ಭಾರತವು ರವಿವಾರ ಸುಮಾರು 400 ಜನರನ್ನು ಮೂರು ವಿಭಿನ್ನ ವಿಮಾನಗಳಲ್ಲಿ ಕರೆತಂದಿದೆ. ಇವರಲ್ಲಿಇಬ್ಬರು ಅಫ್ಘಾನಿಸ್ತಾನದ ಸಂಸದರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News