ಮತ್ಸ್ಯ ಸಮೃದ್ಧಿಗಾಗಿ ಮಲ್ಪೆ ಮೀನುಗಾರರಿಂದ ಸಾಮೂಹಿಕ ಸಮುದ್ರ ಪೂಜೆ

Update: 2021-08-22 15:04 GMT

ಮಲ್ಪೆ, ಆ.22: ಮಲ್ಪೆ ಮೀನುಗಾರ ಸಂಘದ ವತಿಯಿಂದ ಸಮಸ್ತ ಮೀನು ಗಾರ ಶ್ರೇಯೋಭಿವೃದ್ದಿಗಾಗಿ ರವಿವಾರ ಮಲ್ಪೆ ವಡಭಾಂಡೇಶ್ವರ ಸಮುದ್ರ ತೀರದಲ್ಲಿ ಸಾಮೂಹಿಕ ಸಮುದ್ರ ಪೂಜೆ ನಡೆಯಿತು.

ಮೀನುಗಾರರು ಬೆಳಗ್ಗೆ ವಡಭಾಂಡ ಬಲರಾಮ ಮತ್ತು ಬೊಬ್ಬರ್ಯ ದೇವರಿಗೆ ಸಾಮೂಹಿಕವಾಗಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸಮುದ್ರ ಕಿನಾರೆಗೆ ಬಂದು ಮುಂಬರುವ ದಿನಗಳಲ್ಲಿ ಮೀನುಗಾರಿಕೆ ಯಾವುದೇ ಅಡ್ಡಿ ಆತಂಕಗಳು ಇಲ್ಲದೆ, ಹೇರಳ ಮತ್ಸ ಸಂಪತ್ತು ಲಭಿಸುವಂತಾಗಲಿ ಎಂದು ಪ್ರಾರ್ಥಿಸಿ ಹಾಲು, ಸೀಯಾಳ, ಪುಷ್ಪವನ್ನು ಸಮುದ್ರರಾಜನಿಗೆ ಅರ್ಪಿಸಿದರು.

ಉಚ್ಚಿಲ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಎ ಸುವರ್ಣ, ಹರಿಯಪ್ಪ ಕೋಟ್ಯಾನ್, ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ದಯಾನಂದ ಕೆ.ಸುವರ್ಣ, ಕಾರ್ಯದರ್ಶಿ ರತ್ನಾಕರ ಸಾಲ್ಯಾನ್, ಉಪಾಧ್ಯಕ್ಷರಾದ ರಮೇಶ್ ಕೋಟ್ಯಾನ್, ರಾಘವ ಜಿ.ಕೆ., ನಾಗರಾಜ್ ಬಿ.ಕುಂದರ್, ರವಿ ಸಾಲ್ಯಾನ್, ರಮೇಶ್ ಕುಂದರ್, ಕೋಶಾಧಿಕಾರಿ ಕರುಣಾಕರ ಸಾಲ್ಯಾನ್, ಮೀನುಗಾರ ಮುಖಂಡರುಗಳಾದ ಸುಭಾಸ್ ಮೆಂಡನ್, ಗುಂಡು ಬಿ.ಅಮೀನ್, ಹಿರಿಯಣ್ಣ ಟಿ.ಕಿದಿಯೂರು, ಸತೀಶ್ ಕುಂದರ್, ಕಿಶೋರ್ ಡಿ.ಸುವರ್ಣ, ಕೇಶವ ಕೋಟ್ಯಾನ್, ರಾಮಚಂದ್ರ ಕುಂದರ್, ಸಾಧು ಸಾಲ್ಯಾನ್, ಕಿಶೋರ್ ಪಡುಕರೆ, ಗೋಪಾಲ್ ಆರ್.ಕೆ., ಗುಂಡು ಬಿ.ಅಮೀನ್, ಪ್ಯಾರು ಸಾಹೇಬ್, ಬೇಬಿ ಹೆಚ್. ಸಾಲ್ಯಾನ್, ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ್, ದಿವಾಕರ ಖಾವಿರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News