ಬಾವಿಗೆ ಹಾರಿ ಆತ್ಮಹತ್ಯೆ
Update: 2021-08-22 21:04 IST
ಕುಂದಾಪುರ, ಆ.22: ಅನಾರೋಗ್ಯದಿಂದ ಬಳಲುತ್ತಿದ್ದ ಕುಂದಾಪುರ ಮುದ್ದು ಗುಡೆಯ ಸುಮತಿ ಆರ್.ಶೆಣೈ(73) ಎಂಬವರು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ಆ.21ರಂದು ಸಂಜೆ ಮನೆಯ ಅಂಗಳದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.