ನಾಪತ್ತೆ
Update: 2021-08-22 21:24 IST
ಕುಂದಾಪುರ, ಆ.22: ಬಸ್ರೂರು ಹಲವರ ಕೆರೆ ಹತ್ತಿರ ನಿವಾಸಿ ವಿಕ್ಟರ್ ಆರ್.ಡಿಸೋಜ (63) ಎಂಬವರು ಆ.20ರಂದು ರಾತ್ರಿ ಮನೆಯಿಂದ ಬೈಕಿನಲ್ಲಿ ಹೋದವರು ನಾಪತ್ತೆಯಾಗಿದ್ದಾರೆ.
ಇವರ ಬೈಕ್ ಬಸ್ರೂರು ರೈಲ್ವೆ ಸೇತುವೆ ಕೆಳಗಡೆ ಪತ್ತೆಯಾಗಿದ್ದು, ರೈಲ್ವೆ ಸೇತುವೆ ಮೇಲೆ ಚಪ್ಪಲಿ ಕಂಡುಬಂದಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.