ಯಶವಂತಪುರ-ವಾಸ್ಕೋ-ಡ-ಗಾಮ ರೈಲು ಸಮಯ ಬದಲಾವಣೆ

Update: 2021-08-23 13:01 GMT

ಉಡುಪಿ, ಆ.23: ದಕ್ಷಿಣ ಪಶ್ಚಿಮ ರೈಲ್ವೆ, ಬೆಂಗಳೂರಿನ ಯಶವಂತಪುರ ಹಾಗೂ ವಾಸ್ಕೋ-ಡ- ಗಾಮ ನಡುವೆ ಸಂಚರಿಸುವ ದೈನಂದಿನ ರೈಲಿನ ಸಮಯದಲ್ಲಿ ಸೆ.1ರಿಂದ ಬದಲಾವಣೆಯನ್ನು ಮಾಡಲು ನಿರ್ಧರಿಸಿದೆ.

ರೈಲು ನಂ.07339 ಯಶವಂತಪುರ-ವಾಸ್ಕೋ-ಡ-ಗಾಮ ದೈನಂದಿನ ಎಕ್ಸ್‌ಪ್ರೆಸ್ ವಿಶೇಷ ರೈಲು ಸೆ.1ರಿಂದ ಅಪರಾಹ್ನ 3:00ಕ್ಕೆ ಯಶವಂತಪುರ ರೈಲು ನಿಲ್ದಾಣದಿಂದ ನಿರ್ಗಮಿಸಲಿದ್ದು, ಮರುದಿನ ಬೆಳಗ್ಗೆ 5:00ಗಂಟೆಗೆ ವಾಸ್ಕೋ-ಡ- ಗಾಮ ತಲುಪಲಿದೆ.

ರೈಲು ನಂ.07340 ವಾಸ್ಕೋ-ಡ-ಗಾಮ- ಯಶವಂತಪುರ ದೈನಂದಿನ ಎಕ್ಸ್‌ಪ್ರೆಸ್ ವಿಶೇಷ ರೈಲು ಸೆ.1ರಿಂದ ರಾತ್ರಿ 10:25ಕ್ಕೆ ವಾಸ್ಕೋ ಡ ಗಾಮ ರೈಲು ನಿಲ್ದಾಣದಿಂದ ನಿರ್ಗಮಿಸಲಿದ್ದು, ಮರುದಿನ ಅಪರಾಹ್ನ 12:40ಕ್ಕೆ ಯಶವಂತಪುರ ರೈಲು ನಿಲ್ದಾಣ ತಲುಪಲಿದೆ.

ರೈಲಿಗೆ ನಿಲುಗಡೆ ಸೇರಿದಂತೆ ಇನ್ನೂ ಹೆಚ್ಚಿನ ವಿವರಗಳನ್ನು ಎನ್‌ಟಿಇಎಸ್ ಆ್ಯಪ್ ಅಥವಾ ವೆಬ್‌ಸೈಟ್ -www.enquiry.indianrail.gov.in-ಗೆ ಭೇಟಿ ನೀಡುವಂತೆ ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಅವಧಿ ವಿಸ್ತರಣೆ: ಆ.30ರವರೆಗೆ ಸಂಚರಿಸಬೇಕಿದ್ದ ರೈಲು ನಂ.09424/09423 ಗಾಂಧಿಧಾಮ ಜಂಕ್ಷನ್-ತಿರುನಲ್ವೇಲಿ ಜಂಕ್ಷನ್ ಸಾಪ್ತಾಹಿಕ ಸೂಪರ್‌ಫಾಸ್ಟ್ ಹಬ್ಬದ ವಿಶೇಷ ರೈಲಿನ ಸಂಚಾರವನ್ನು ಸೆ.6ರಿಂದ ಮುಂದಿನ ಪ್ರಕಟಣೆಯವರೆಗೆ ವಿಸ್ತರಿಸಲು ಪಶ್ಚಿಮ ರೈಲ್ವೆ ನಿರ್ಧರಿಸಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News