ಉಡುಪಿ: ಜಾತ್ಯತೀತ ಜನತಾದಳಕ್ಕೆ ತಾಲೂಕು ಅಧ್ಯಕ್ಷರ ನೇಮಕ
Update: 2021-08-23 18:41 IST
ಉಡುಪಿ, ಆ.23: ಜಾತ್ಯತೀತ ಜನತಾದಳದ ಉಡುಪಿ ವಿಧಾನಸಭಾ ಕ್ಷೇತ್ರದ ನೂತನ ಅಧ್ಯಕ್ಷರಾಗಿ ಬಾಲಕೃಷ್ಣ ಆಚಾರ್ಯ ಕಬ್ಬೆಟ್ಟು ಅವರನ್ನು ಪಕ್ಷದ ವರಿಷ್ಠರ ಅನುಮೋದನೆಯೊಂದಿಗೆ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗೀಶ್ ವಿ.ಶೆಟ್ಟಿ ನೇಮಿಸಿದ್ದಾರೆ.
ಅದೇ ರೀತಿ ಕಾರ್ಕಳ ವಿಧಾನಸಭಾ ಕ್ಷೇತ್ರದ ನೂತನ ಅಧ್ಯಕ್ಷರಾಗಿ ಶ್ರೀಕಾಂತ್ ಪೂಜಾರಿ ಹೆಬ್ರಿ, ಕುಂದಾಪುರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಕಿಶೋರ್ ಬಲ್ಲಾಳ್ ಹಾಗೂ ಕಾಪು ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾಗಿ ಇಕ್ಬಾಲ್ ಆತ್ರಾಡಿ ಇವರನ್ನು ನೇಮಕಗೊಳಿಸಿರುವುದಾಗಿ ಯೋಗೀಶ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.