×
Ad

ಕುಂದಾಪುರ: ಹೊಳೆಯಲ್ಲಿ ಮುಳುಗಿ ಸಹೋದರ ಸಂಬಂಧಿ ಯುವಕರಿಬ್ಬರು ಮೃತ್ಯು

Update: 2021-08-24 10:46 IST

ಕುಂದಾಪುರ, ಆ.24: ಆರ್ಡಿ ಕೊಂಜಾಡಿ ಗಂಟುಬೀಳು ಚಕ್ಕರ್‌ಮಕ್ಕಿ ಸಮೀಪದ ಕುಂಟುಹೊಳೆ ಕುಪ್ಪರಿಗೆಗುಂಡಿಯ ನೀರಿನಲ್ಲಿ ಮುಳುಗಿ ಯುವಕರಿಬ್ಬರು ಮುಳುಗಿ ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ.

ಮೃತರನ್ನು 9ನೇ ಮೈಲ್‌ಕಲ್ಲು ನಿವಾಸಿ ದಿ.ಕಾಳು ನಾಯ್ಕ ಎಂಬರವರ ಪುತ್ರ ಮೋಹನ ನಾಯ್ಕ (21) ಹಾಗೂ ಮಹಾಬಲ ನಾಯ್ಕ ಎಂಬವರ ಪುತ್ರ ಸುರೇಶ (19) ಎಂದು ಗುರುತಿಸಲಾಗಿದೆ.‌ ಇವರಿಬ್ಬರು ಸಹೋದರ ಸಂಬಂಧಿಗಳಾಗಿದ್ದಾರೆ.

ಇವರು ಕೊಂಜಾಡಿ ಗಂಟುಬೀಳು ಪರಿಸರಕ್ಕೆ ಸೋಮವಾರ ಕೂಲಿ ಕೆಲಸಕ್ಕೆ ಹೋಗಿದ್ದರು. ತಡರಾತ್ರಿಯ ವರೆಗೂ ಇವರು ಮನೆಗೆ ವಾಪಸ್ಸಾಗದ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಟ ನಡೆಸಿದಾಗ ಕುಂಟುಹೊಳೆ ಕುಪ್ಪರಿಗೆಗುಂಡಿ ಸಮೀಪ ಇಬ್ಬರ ಚಪ್ಪಲಿ ಕಾಣಸಿಕ್ಕಿದೆಯೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಶೋಧ ನಡೆಸಿದಾಗ ಇಬ್ಬರ ಮೃತದೇಹಗಳು ಪತ್ತೆಯಾಗಿವೆ.

ಇವರಿಬ್ಬರು ಮಧ್ಯಾಹ್ನ ಊಟದ ಬಳಿಕ ಸಮೀಪದಲ್ಲಿ ಹರಿಯುತ್ತಿದ್ದ ಕುಂಟುಹೊಳೆ ಕುಪ್ಪರಿಗೆಗುಂಡಿ ಎಂಬಲ್ಲಿ ಸೊಪ್ಪು ಕಡಿಯಲು ತೆರಳಿದ್ದರೆನ್ನಲಾಗಿದ್ದು, ಈ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

 ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News