ವಾಟ್ಸ್ ಆ್ಯಪ್ ಮೂಲಕ ನಿಮ್ಮ ಕೋವಿಡ್ ಲಸಿಕೆಯ ಅಪಾಯಿಂಟ್ ಮೆಂಟ್ ಹೀಗೆ ಬುಕ್ ಮಾಡಬಹುದು

Update: 2021-08-24 08:15 GMT

ಹೊಸದಿಲ್ಲಿ: ಜನರು ಈಗ ವಾಟ್ಸ್ ಆ್ಯಪ್ ಮೂಲಕ ಕೋವಿಡ್ ಲಸಿಕೆಗಳಿಗಾಗಿ ಅಪಾಯಿಂಟ್ ಮೆಂಟ್ ಗಳನ್ನು ಕಾಯ್ದಿರಿಸಬಹುದು. ಇದರ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಲಸಿಕೆಗಾಗಿ ಅಪಾಯಿಂಟ್ ಮೆಂಟ್ ಗಳನ್ನು ಕಾಯ್ದಿರಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಬಳಕೆದಾರರು ವಾಟ್ಸ್ ಆ್ಯಪ್ ನಲ್ಲಿ  MyGovIndia Corona Helpdesk ಗೆ 'ಬುಕ್ ಸ್ಲಾಟ್' ಸಂದೇಶವನ್ನು ಕಳುಹಿಸಬೇಕಾಗುತ್ತದೆ. ಅಂತಹ ಸಂದೇಶವನ್ನು ಕಳುಹಿಸಬೇಕಾದ ಸಂಖ್ಯೆ +91 9013151515. ಮುಂದೆ ಬಳಕೆದಾರರು OTP ಪಡೆಯುತ್ತಾರೆ. ಇದು ವ್ಯಕ್ತಿಯ ಫೋನ್ ಸಂಖ್ಯೆಯನ್ನು ಪರಿಶೀಲಿಸುವುದು. ಮುಂದಿನ ಹಂತವೆಂದರೆ ಆದ್ಯತೆಯ ದಿನಾಂಕ, ಸ್ಥಳ, ಪಿನ್ ಕೋಡ್ ಹಾಗೂ  ಲಸಿಕೆಯ ಪ್ರಕಾರವನ್ನು ಆರಿಸುವುದು. ಅಂತಿಮವಾಗಿ ವ್ಯಾಕ್ಸಿನೇಷನ್ ಗೊತ್ತುಪಡಿಸುವಿಕೆಗೆ ದೃಢೀಕರಣವನ್ನು ಮಾಡಬೇಕಾಗಿದೆ.

ಗೊತ್ತುಪಡಿಸುವಿಕೆ(ಅಪಾಯಿಂಟ್ ಮೆಂಟ್)ಯನ್ನು ಕಾಯ್ದಿರಿಸುವ ಹಂತಗಳನ್ನು ಟ್ವಿಟರ್‌ನಲ್ಲಿ MyGovIndia ಹ್ಯಾಂಡಲ್ ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News