ಎಲ್ಲಾ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ನಾರಾಯಣ್ ರಾಣೆ: ವರದಿ

Update: 2021-08-24 09:29 GMT

ಮುಂಬೈ: ಕೇಂದ್ರ ಸಚಿವ ನಾರಾಯಣ್ ರಾಣೆ ಅವರು ಉದ್ಧವ್ ಠಾಕ್ರೆ ವಿರುದ್ಧದ ವಿವಾದಾತ್ಮಕ ಹೇಳಿಕೆಗಾಗಿ  ಬಂಧನ ಭೀತಿ ಎದುರಿಸುತ್ತಿದ್ದಾರೆ. ಮುಖ್ಯಮಂತ್ರಿಗೆ ಕಪಾಳಮೋಕ್ಷ ಮಾಡುವುದಾಗಿ  ಹೇಳಿದ್ದ ರಾಣೆಯವರನ್ನು ಬಂಧಿಸಲು  ನಾಸಿಕ್ ಪೊಲೀಸ್ ತಂಡವು ಬಂಧನಾದೇಶದೊಂದಿಗೆ ರತ್ನ ಗಿರಿ ಜಿಲ್ಲೆಗೆ ಹೊರಟಿದೆ ಎಂದು ವರದಿಯಾಗಿದೆ.

ನಾರಾಯಣ್ ರಾಣೆ ಪ್ರಸ್ತುತ ಕೊಂಕಣ ಪ್ರದೇಶದಲ್ಲಿ ಜನ್ ಆಶೀರ್ವಾದ್ ರ್ಯಾಲಿಯಲ್ಲಿ ಭಾಗವಹಿಸುತ್ತಿದ್ದಾರೆ . ಸಿಎಂ ವಿರುದ್ಧ ಟೀಕೆಗೆ ಸಂಬಂಧಿಸಿದಂತೆ ಅನೇಕ ಎಫ್‌ಐಆರ್ ಗಳು  ದಾಖಲಾದ ನಂತರ ಪೊಲೀಸರು ರಾಣೆಯವರನ್ನು ಬಂಧಿಸಲು ಮುಂದಾಗಿದ್ದಾರೆ.

ನ್ಯಾಯವಾದಿ ಅನಿಕೇತ್ ನಿಕಮ್ ಅವರು ನಾರಾಯಣ ರಾಣೆ ಪರವಾಗಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದು, ಸಚಿವರ ವಿರುದ್ಧದ ಎಫ್ ಐಆರ್  ಗಳನ್ನು ರದ್ದುಗೊಳಿಸುವಂತೆ ಮನವಿ ಮಾಡಿದರು ಎಂದು India Today ವರದಿ ಮಾಡಿದೆ.

 ರಾಣೆ ವಿರುದ್ಧ ದಾಖಲಾಗಿರುವ  ಹಾಗೂ ದಾಖಲಾಗಲು ಸಿದ್ದವಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ರದ್ದುಗೊಳಿಸಲು ಕೋರಲಾಗುವುದು. ತಕ್ಷಣದ ಪರಿಹಾರವಾಗಿ ಬಂಧನದಿಂದ ರಕ್ಷಣೆ ಕೋರುವುದಾಗಿ  ನಿಕಮ್ ಹೇಳಿದ್ದಾರೆ..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News