ಕಾಬೂಲ್ ನಿಂದ ಯುಕ್ರೇನ್ ವಿಮಾನ ಅಪಹರಣ

Update: 2021-08-24 09:59 GMT

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತನ್ನ ನಾಗರಿಕರನ್ನು ತೆರವುಗೊಳಿಸಲು ಬಂದಿದ್ದ ಯುಕ್ರೇನಿಯನ್ ವಿಮಾನವನ್ನು ಅಪರಿಚಿತ ಸಶಸ್ತ್ರ ಅಪಹರಣಕಾರರು ಅಪಹರಿಸಿ ಇರಾನ್‌ಗೆ ಕೊಂಡೊಯ್ದಿದ್ದಾರೆ ಎಂದು ಯುಕ್ರೇನ್ ಸಚಿವರೊಬ್ಬರು ಹೇಳಿದ್ದಾರೆ ಎಂದು ವರದಿಯಾಗಿದೆ.

ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಯುಕ್ರೇನಿಯನ್ನರನ್ನು ಸ್ಥಳಾಂತರಿಸಲು ಕಳೆದ ವಾರ ವಿಮಾನ ಕಾಬೂಲ್ ಗೆ ಬಂದಿತ್ತು ಎಂದು ವರದಿಯಾಗಿದೆ.

"ಕಳೆದ ರವಿವಾರ ನಮ್ಮ ವಿಮಾನವನ್ನು ಅಪರಿಚಿತರು ಅಪಹರಿಸಿದ್ದಾರೆ. ಮಂಗಳವಾರ ವಿಮಾನವು ಪ್ರಾಯೋಗಿಕವಾಗಿ ನಮ್ಮಿಂದ ಕದಿಯಲ್ಪಟ್ಟಿತು. ಇದು ಯುಕ್ರೇನಿಯನ್ನರನ್ನು ಏರ್ ಲಿಫ್ಟ್ ಮಾಡುವ ಬದಲು ಅಪರಿಚಿತ ಪ್ರಯಾಣಿಕರ ಗುಂಪಿನೊಂದಿಗೆ ಇರಾನ್‌ಗೆ ಹಾರಿತು. ನಮ್ಮ ಮುಂದಿನ ಮೂರು ತೆರವು ಪ್ರಯತ್ನಗಳು ಯಶಸ್ವಿಯಾಗಲಿಲ್ಲ. ಏಕೆಂದರೆ ನಮ್ಮ ನಾಗರಿಕರು ವಿಮಾನ ನಿಲ್ದಾಣಕ್ಕೆ ಪ್ರವೇಶಿಸಲು ಸಾಧ್ಯವಾಗಲಿಲ್ಲ "ಎಂದು ಯುಕ್ರೇನ್‌ನ ಉಪ ವಿದೇಶಾಂಗ ಸಚಿವ ಯೆವ್ಗೆನಿ ಯೆನಿನ್ ರಷ್ಯಾ ಸುದ್ದಿ ಸಂಸ್ಥೆ TASS ಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News